ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುನೆಸ್ಕೋ 'ಪಾರಂಪರಿಕ ನಗರ'ವಾಗಿ ಮೈಸೂರು

By Rajendra
|
Google Oneindia Kannada News

Mysore palace hall
ಮೈಸೂರು, ಮಾ.1: ಮೈಸೂರು ನಗರವನ್ನು 'ಪಾರಂಪರಿಕ ನಗರ' ಎಂದು ಯುನೆಸ್ಕೊ ಘೋಷಿಸಿರುವುವಾಗಿ ಪರಂಪರೆ ಇಲಾಖೆ ಆಯುಕ್ತೆ ನೀಲಾ ಮಂಜುನಾಥ್ ತಿಳಿಸಿದ್ದಾರೆ. ರಾಮ್ ಸನ್ಸ್ ಕಲಾ ಪ್ರತಿಷ್ಠಾನ ಮತ್ತು ಶ್ರೀಕಲಾನಿಕೇತನ ಕಲಾ ಶಾಲೆ ಪ್ರತಿಮಾ ಕಲಾ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಪರಂಪರೆ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳು ವಿಭಿನ್ನವಾಗಿದ್ದು ವಿಶಿಷ್ಟ ಶೈಲಿಯಲ್ಲಿವೆ. ರಾಜ್ಯದಲ್ಲಿ ಬೇರೆಡೆ ದೇವಾಲಯ, ಕೋಟೆ ಕೊತ್ತಲಗಳಿದ್ದರೂ ಇಂಡೋ ಸಾರ್ಸನಿಕ್ ಶೈಲಿಯ ಇಂತಹ ಕಟ್ಟಡಗಳು ಬೇರೆಡೆ ಸಿಗುವುದು ಅಪರೂಪ. ಇಲ್ಲಿನ ಕಟ್ಟಡಗಳು ಸುರಕ್ಷಿತ ಹಾಗೂ ಸುಂದರವಾಗಿವೆ ಎಂದು ನೀಲಾ ಮಂಜುನಾಥ್ ಹೇಳಿದರು.

ಎಚ್ ಶಿವಕುಮಾರ್ ದೊಡ್ಡ ಅರಸಿನಕೆರೆ ಅವರು ರಚಿಸಿರುವ ಪರಂಪರೆ ಚಿತ್ರಕಲಾ ಪ್ರದರ್ಶನದಲ್ಲಿ ಜಲವರ್ಣದಲ್ಲಿ ರಚಿಸಿದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಜಲವರ್ಣದಲ್ಲಿ ಕಟ್ಟಡಗಳನ್ನು ರಚಿಸುವುದು ಕಷ್ಟದ ಕೆಲಸ. ಆದರೆ ಶಿವಕುಮಾರ್ ಅವರು ಈ ಸವಾಲನ್ನು ಮೀರಿ ಉತ್ತಮ ವರ್ಣಚಿತ್ರಗಳನ್ನು ರಚಿಸಿದ್ದಾರೆ ಎಂದು ನೀಲಾ ಅವರು ಶ್ಲಾಘಿಸಿದರು.

ಮೈಸೂರು ಅರಮನೆ, ದೊಡ್ಡ ಗಡಿಯಾರ, ಲಲಿತ ಮಹಲ್ ಅರಮನೆ, ಕುಕ್ಕರಹಳ್ಳಿ ಕೆರೆ, ನಂದಿ, ಗಡಿಯಾರ ಗೋಪುರ, ರೈಲ್ವೆ ನಿಲ್ದಾಣ, ಜಗನ್ ಮೋಹನ ಅರಮನೆ, ಟೌನ್ ಹಾಲ್, ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಹಾಲ್, ಚಾಮುಂಡಿ ಬೆಟ್ಟ, ಕೆ ಆರ್ ಸರ್ಕಲ್ ಸೇರಿದಂತೆ 30ಕ್ಕೂ ಹೆಚ್ಚು ಶಿವಕುಮಾರ್ ಅವರ ಜಲವರ್ಣಚಿತ್ರಗಳನ್ನು ಪ್ರದರ್ಶಿಸಲಾಯಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X