ಭಾರತೀಯರೆಲ್ಲರೂ ಹಿಂದೂಗಳು: ಭಾಗವತ್
ಭೋಪಾಲ್
,ಮಾ 1 : ಒಬ್ಬ ಹಿಂದೂ ಆಗಿರದ ಹೊರತು ಆತ ಭಾರತೀಯ ಎಂದು ಎನಿಸಿಕೊಳ್ಳಲಾರ, ಭಾರತೀಯರಾಗಿರುವವರು ಎಲ್ಲರೂ ಹಿಂದೂಗಳು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. id="toptextpromo">ಆರ್ಎಸ್ಎಸ್
ಮತ್ತು ಹಿಂದೂ ಸಂಘಟನೆಗಳ ವಾರ್ಷಿಕ ಸಮಾಗಮದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಭಾಗವತ್, ನಮ್ಮ ಪ್ರಕಾರ ಹಿಂದೂ ಎನ್ನುವುದರ ಅರ್ಥ ಯಾವುದೇ ಒಂದು ಧರ್ಮವಲ್ಲ. ಅದು ಜೀವನ ಶೈಲಿ. ಹಿಂದೂವೆನಿಸಿಕೊಳ್ಳದ ಹೊರತು ಯಾರೂ ಭಾರತೀಯನಾಗಲಾರ ಎಂದು ಹೇಳಿಕೆನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಮೆರಿಕ
ಹಾಗೂ ಚೀನಾ ದೇಶಗಳ ಮೇಲೆ ಹರಿಹಾಯ್ದ ಭಾಗವತ್, ಅಮೆರಿಕ ತನ್ನ ಕಳಪೆ ಹಾಗೂ ನಿಷೇಧಿತ ಔಷಧಗಳ ಮಾರಾಟಕ್ಕೆ ಭಾರತವನ್ನು ಆರಿಸಿಕೊಂಡಿದೆ. ಆಟಿಕೆಗಳು, ಎಲೆಕ್ಟ್ರಾನಿಕ್ ವಸ್ತುಗಳನ್ನು ಚೀನಾ ಇದೇ ರೀತಿ ನಮ್ಮ ದೇಶದ ಕಾಳಸಂತೆಗೆ ಬಿಡುತ್ತಿದೆ. ತಮ್ಮ ಪ್ರಾಬಲ್ಯ ಹೆಚ್ಚಿಸಿಕೊಳ್ಳಲು ಭಾರತವನ್ನು ಬಲಿಪಶು ಮಾಡುತ್ತಿವೆ ಎಂದು ಕಿಡಿಕಾರಿದರು.











Click it and Unblock the Notifications