ಟ್ವಿಟರ್ ನಲ್ಲಿ ಯಾವ ಭಾಷೆ ಬಳಕೆ ಎಷ್ಟೆಷ್ಟು?

Only 50% Of Twitter Messages Are In English, Study Says
ಪ್ಯಾರೀಸ್, ಫೆ. 26: ಟ್ವಿಟ್ಟರ್ .ಕಾಂನ ಸುಮಾರು 2.8ದಶಲಕ್ಷ ಟ್ವೀಟ್ ಸಂದೇಶವನ್ನು ಆಧಾರವಾಗಿಟ್ಟುಕೊಂಡು ಪ್ಯಾರೀಸ್ ಮೂಲದ ಸೆಮಿಯೊಕೋಸ್ಟ್ ಸಂಸ್ಥೆ ಸಮೀಕ್ಷೆ ನಡೆಸಿದೆ. ಇದರ ಫಲಿತಾಂಶದಂತೆ, ಶೇ. 50ರಷ್ಟು ಟ್ವೀಟ್ ಗಳು ಮಾತ್ರ ಆಂಗ್ಲ ಭಾಷೆಯಲ್ಲಿರುತ್ತದೆ, ಮಿಕ್ಕಂತೆ ಪ್ರಾದೇಶಿಕ ಭಾಷೆ ಬಳಕೆಯಾಗುತ್ತ್ತದೆ ಎಂದು ತಿಳಿದುಬಂದಿದೆ.

ಮೈಕ್ರೋ ಬ್ಲಾಗಿಂಗ್ ನಲ್ಲಿ ಭಾಷೆ ಬಳಕೆ ಬಗ್ಗೆ ನಡೆಸಲಾದ ಸಮೀಕ್ಷೆ ಪ್ರಕಾರ ಕಳೆದ ವರ್ಷ ಇಂಗ್ಲೀಷ್ ಭಾಷೆ ಬಳಕೆ ಶೇ. 25 ರಷ್ಟಿತ್ತು. ಈ ವರ್ಷದಲ್ಲಿ ಇಂಗ್ಲೀಷ್ ಬಳಕೆ ಶೇ. 50 ಮಾತ್ರ ಬಳಕೆ ಆಗುತ್ತಿದೆಯಂತೆ. ಮೊದಲ ಐದು ಸ್ಥಾನಗಳಲ್ಲಿರುವ ಟ್ವಿಟ್ಟರ್ ಬಳಕೆ ಭಾಷೆಗಳನ್ನು ಇಂಗ್ಲೀಷ್, ಜಪಾನೀಸ್, ಪೋರ್ಚುಗೀಸ್, ಮಲಾಯ್ ಹಾಗೂ ಸ್ಪಾನೀಷ್ ಎಂದು ಗುರುತಿಸಲಾಗಿದೆ.

ಸಮೀಕ್ಷೆಯಲ್ಲಿ ಏನಿಲ್ಲವೆಂದರೂ ಸುಮಾರು 41ಭಾಷೆಗಳ ಸಂದೇಶಗಳು ಬಂದು ಹೋಗಿವೆ. ಇದರಲ್ಲಿ ಗ್ರೀಕ್, ಹೀಬ್ರೂ, ಚೈನೀಸ್, ಕೊರಿಯನ್, ತಮಿಳು.. ಇತ್ಯಾದಿ ಸೇರಿವೆ. ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕಗಳಲ್ಲಿ ಟ್ವಿಟ್ಟರ್ ಹೆಚ್ಚು ಪ್ರಭಾವಗೊಂಡಂತೆ ಇಂಗ್ಲೀಷ್ ಬಳಕೆ ಕೂಡ ಕ್ಷೀಣಿಸುವ ಸಾಧ್ಯತೆಗಳಿವೆ. ಸ್ಥಳೀಯ ಭಾಷೆಗಳ ಬಳಕೆಯ ಸಂದೇಶಗಳು ಹೆಚ್ಚಲಿವೆ ಎಂದು ಸಮೀಕ್ಷೆ ಹೇಳುತ್ತದೆ.

ಈ ಸಮೀಕ್ಷೆ ಸಂಪೂರ್ಣ ವಿವರವನ್ನು ನೀಡದಿದ್ದರೂ ಟ್ವಿಟ್ಟರ್ ನ ಪಬ್ಲಿಕ್ ಟೈಮ್ ಲೈನ್ ನತ್ತ ಕಣ್ಣು ಹಾಯಿಸಿ, ಟ್ವಿಟ್ಟರ್ ಬಳಸುವ ವೈವಿಧ್ಯಮಯ ಜನರ ಮಾಹಿತಿಯನ್ನಂತೂ ನೀಡುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+