ಪೆಟ್ರೋಲ್ ಬೆಲೆ 3 ರುಪಾಯಿ ಏರಿಕೆ!

ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 2.67 ಹಾಗೂ ಡಿಸೇಲ್ ಗೆ 2.58 ರುಪಾಯಿ ಏರಿಕೆಯಾಗಲಿದೆ. ಉಳಿದ ರಾಜ್ಯಗಳಲ್ಲಿ ಸಾರಿಗೆ ವೆಚ್ಚ ಸೇರಿ ಪ್ರತಿ ಲೀಟರ್ ಗೆ 3 ರಿಂದ 4 ರುಪಾಯಿ ಆಗಲಿದೆ. ಶುಕ್ರವಾರ ಮಧ್ಯರಾತ್ರಿಯಿಂದಲೇ ನೂತನ ದರ ಜಾರಿಗೆ ಬರುವುದು ಖಾತ್ರಿಯಾಗಿದೆ.
ಕೇಂದ್ರದ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಮಂಡಿಸಿದ ಕೇಂದ್ರ ಬಜೆಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂಧನ ದರ ಏರಿಕೆಗೆ ಸಂಬಂಧಿದಂತೆ ವಿರೋಧ ಪಕ್ಷಗಳು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರೆ, ಕೈಗಾರಿಕೆ ವಲಯ ಕೇಂದ್ರ ಬಜೆಟ್ ನ್ನು ಸ್ವಾಗತಿಸಿದೆ.
ಇದು ಆಮ್ ಅದ್ಮಿ ಬಜೆಟ್ ಎಂಬುದು ಮೇಲ್ನೋಟಕ್ಕೆ ಕಂಡುಬಂದರೂ ಇಂಧನ ದರ ಏರಿಕೆ ಮಾತ್ರ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ. ಪೆಟ್ರೋಲ್ ಮತ್ತು ಡಿಸೇಲ್ ಬೆಲೆ 1 ರುಪಾಯಿ ಏರಿಕೆ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆಯೇ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಲಾಲು ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್, ಎಡಪಕ್ಷಗಳು ನಾಯಕರು ಸಂಸತ್ ಎದುರು ಪ್ರತಿಭಟನೆ ನಡೆಸಿದರು.












Click it and Unblock the Notifications