ಪತ್ನಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಶಾಸಕ
ಪಾಟ್ನಾ,
ಫೆ. 26 : ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಡಳಿತರೂಢ ಜೆಡಿಯು ಶಾಸಕನೊಬ್ಬ ಸಚಿವರೊಬ್ಬರ ನಿವಾಸದಲ್ಲಿ ಪತ್ನಿ ಮತ್ತು ಆರು ತಿಂಗಳ ಹಸುಳೆಯನ್ನು ಹತ್ಯೆಗೈದು ಕೊನೆಗೆ ತಾನು ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪಾಟ್ನಾದಲ್ಲಿ ನಡೆದಿದೆ. id="toptextpromo">ಬಿಹಾರ
ಸರಕಾರ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ನರೇಂದ್ರ ಸಿಂಗ್ ಅವರ ಕಚೇರಿ ನಿವಾಸದಲ್ಲಿ ಈ ಘಟನೆ ಸಂಭವಿಸಿದ್ದು, ಘಟನೆ ತಿಳಿದ ಸಚಿವ ನರೇಂದ್ರ ಸಿಂಗ್ ತೀವ್ರ ಅಸ್ವಸ್ಥಗೊಂಡಿದ್ದಾರೆ. ಹೃದಯ ಸಂಬಂಧಿ ಖಾಯಿಲೆಯಿಂದ ಸಚಿವರು ಬಳಲುತ್ತಿದ್ದು, ಪಾಟ್ನಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. id='are-slot-1' class='oiad oi-axt oiadv'> id='top-searched-articles'>ಜಾಮಾಯಿ
ಕ್ಷೇತ್ರದ ಶಾಸಕ ಅಭಯಸಿಂಗ್ ಪತ್ನಿ ಮತ್ತು ಆರು ತಿಂಗಳ ಮಗುವನ್ನು ಹತ್ಯೆಗೈದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಳೆದ ರಾತ್ರಿ ಶಾಸಕ ಮತ್ತು ಆತನ ಪತ್ನಿ ರಾತ್ರಿ 2 ಗಂಟೆವರೆಗೂ ಜಗಳ ಮಾಡಿಕೊಂಡಿದ್ದೇ ಈ ದುರ್ಘಟನೆ ಸಂಭವಿಸಲು ಕಾರಣವಾಗಿದೆ. ಘಟನೆಗೆ ಸ್ಪಷ್ಟಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.











Click it and Unblock the Notifications