ಜನಪರ ರೈಲ್ವೆ ಬಜೆಟ್, ರೈಲ್ವೆ ಖಾಸಗೀಕರಣ ಇಲ್ಲ
ನವದೆಹಲಿ,
ಫೆ. 24 : ಎರಡನೇ ಅವಧಿಗೆ ಕೇಂದ್ರದ ಅಧಿಕಾರದ ಚುಕ್ಕಾಣಿ ಹಿಡಿದಿರುವ ಯುಪಿಎ ಸರಕಾರದ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಎರಡನೇ ಬಾರಿ ರೈಲ್ವೆ ಬಜೆಟ್ 2010-11 ನ್ನು ಮಂಡಿಸುತ್ತಿದ್ದು, ಇದು ಮೂರನೇ ರೈಲ್ವೆ ಬಜೆಟ್ ಮಂಡನೆಯಾಗಿದೆ. ಯುಪಿಎ ಸರಕಾರದಲ್ಲಿ ಎರಡನೇ ಬಾರಿಯಾದರೆ, ಎನ್ ಡಿ ಎ ಅಧಿಕಾರವಧಿಯಲ್ಲಿ ರೈಲ್ವೆ ಸಚಿವರಾಗಿದ್ದ ಅವರು ಪ್ರಥಮ ರೈಲ್ವೆ ಬಜೆಟ್ ಮಂಡಿಸಿದ್ದರು. id="toptextpromo">ರೈಲ್ವೆ
ಭಾರತೀಯ ಜನರ ಅವಿಭಾಜ್ಯ ಅಂಗವಾಗಿದೆ. ಜನರಿ ನಿರೀಕ್ಷೆ ತಕ್ಕಂತೆ ಕಾರ್ಯ ನಿರ್ವಹಿಸುತ್ತಿರುವ ರೈಲ್ವೆ ಸೇವೆ ದೇಶಾದ್ಯಂತ ಮನೆಮಾತಾಗಿದೆ. 2010ರ ರೈಲ್ವೆ ಬಜೆಟ್ ಜನಪರ ಬಜೆಟ್ ಆಗಿರಲಿದೆ. ರೈಲ್ವೆ ಬೇಡಿಕೆ ಪ್ರಮಾಣ ದೊಡ್ಡದಾಗಿದೆ. ಸಾಮಾಜಿಕ ಸೇವೆಯೇ ರೈಲ್ವೆ ಇಲಾಖೆ ಏಕೈಕ ಗುರಿಯ ಜನರ ಅನುಕೂಲಕ್ಕಾಗಿ ಕಾಲಕಾಲಕ್ಕೆ ನೂತನ ಸೇವೆಗಳನ್ನು ಒದಗಿಸಲಾಗುತ್ತಿದೆ. ಉದ್ದಿಮೆದಾರರು ರೈಲ್ವೆ ಇಲಾಖೆಯೊಂದಿಗೆ ಕೈಜೋಡಿಸಬೇಕು. ಆದರೆ, ರೈಲ್ವೆ ಇಲಾಖೆಯನ್ನು ಯಾವ ಕಾರಣಕ್ಕೂ ಖಾಸಗೀಕರಣ ಮಾಡುವುದಿಲ್ಲ. id='are-slot-1' class='oiad oi-axt oiadv'> id='top-searched-articles'>ವಿಷನ್
2020 ಯೋಜನೆ ಘೋಷಣೆ. ರೈಲ್ವೆ ಪರೀಕ್ಷೆಯನ್ನು ಹಿಂದಿ,ಇಂಗ್ಲಿಷ್, ಉರ್ದು ಅಲ್ಲದೇ ದೇಶದ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲು ನಿರ್ಧಾರ. ಕೇವಲ 7 ತಿಂಗಳಲ್ಲಿ 117 ಹೊಸ ರೈಲುಗಳನ್ನು ಆರಂಭಿಸಲಾಗಿದೆ.











Click it and Unblock the Notifications