ಶೀಘ್ರದಲ್ಲಿ ಎಲ್ಲ ಬ್ಯಾಂಕ್ ಗಳಲ್ಲಿ ಏಕರೂಪ ಚೆಕ್ ಗಳು
ಬೆಂಗಳೂರು,
ಫೆ. 23 : ಒಂದೊಂದು ಬ್ಯಾಂಕ್ ಗಳು ಒಂದೊಂದು ಬಣ್ಣ, ಅಳತೆಯಲ್ಲಿ ಚೆಕ್ ನೀಡುವುದು ಶೀಘ್ರದಲ್ಲೇ ಬಂದ್ ಆಗಲಿದೆ. ಎಲ್ಲ ಬ್ಯಾಂಕ್ ಗಳು ಒಂದೇ ಮಾದರಿ ಚೆಕ್ ಬಳಸುವ ವ್ಯವಸ್ಥೆ ಸದ್ಯದಲ್ಲೇ ಜಾರಿಗೆ ಬರಲಿದೆ. ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಫೆ 22 ರಂದು ಸುತ್ತೋಲೆ ಹೊರಡಿಸಿದೆ. id="toptextpromo">ನಕಲಿ
ಚೆಕ್ ಗಳನ್ನು ಬಳಸಿ ವಂಚನೆ ಮಾಡುವುದನ್ನು ತಡೆಗಟ್ಟಲು ಹೆಚ್ಚು ಸುರಕ್ಷತಾ ಕ್ರಮ ವಹಿಸಲು ಹಾಗೂ ತ್ವರಿತ ವಿಲೇವಾರಿಗಾಗಿ ಹೊಸ ಚೆಕ್ ವ್ಯವಸ್ಥೆ ಜಾರಿಗೆ ತರಲು ಮುಂದಾಗಿದೆ. ಅದಕ್ಕಾಗಿ ರಿಸರ್ವ್ ಬ್ಯಾಂಕ್ ಸಿಟಿಎಸ್(cheque truncation system) 2010 ಸ್ಟಾಂಡರ್ಡ್ ಮಾರ್ಗಸೂಚಿಗಳನ್ನು ರೂಪಿಸಿದೆ. ಚೆಕ್ ವ್ಯವಸ್ಥೆ ಜಾರಿಗೆ ಬಂದ ಮೇಲೆ ಎಲ್ಲ ಬ್ಯಾಂಕ್ ಗಳ ಚೆಕ್ ಗಳ ಮಧ್ಯಭಾಗದಲ್ಲಿ ಸಿಟಿಎಸ್ ಇಂಡಿಯಾ ಎಂಬ ಮುದ್ರೆ ಇರುತ್ತದೆ. ಇದು ರಾಷ್ಟ್ರಸ್ತಂಭ ಇದ್ದಂತೆ ಸುರಕ್ಷತಾ ಮುದ್ರೆಯಾಗಿದ್ದು, ಬೆಳಕಿಗೆ ಹಿಡಿದಾಗ ಮಾತ್ರ ಕಾಣಿಸುತ್ತದೆ. id='are-slot-1' class='oiad oi-axt oiadv'> id='top-searched-articles'>ಸಿಟಿಎಸ್
ಮಾರ್ಗಸೂಚಿಗಳನ್ನು ಎಲ್ಲಾ ವಾಣಿಜ್ಯ ಬ್ಯಾಂಕುಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಹಾಗೂ ಸಹಕಾರ ಬ್ಯಾಂಕುಗಳಿಗೆ ರವಾನಿಸಲಾಗಿದೆ. ಚೆಕ್ ನಲ್ಲಿ ಆಯಾ ಬ್ಯಾಂಕುಗಳ ಮುದ್ರೆಯನ್ನು ಅದೃಶ್ಯ ಇಂಕಿನಲ್ಲಿ ಮುದ್ರಿಸಲಾಗುತ್ತದೆ. ಇದು ಅಲ್ಟ್ರಾ ವಾಯ್ಲೆಟ್ ಸ್ಕ್ಯಾನರ್ ಗಳಲ್ಲಿ ಮಾತ್ರ ಕಾಣುತ್ತದೆ. ಇದರಿಂದ ಚೆಕ್ ನಕಲಿ ಮಾಡುವುದು ತಪ್ಪುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದರು.











Click it and Unblock the Notifications