ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲುಗಳು ಜನರ ಜೀವನಾಡಿ, ಭಾರದ್ವಾಜ್

By Mrutyunjaya Kalmat
|
Google Oneindia Kannada News

HR Bharadwaj
ಬೆಂಗಳೂರು, ಫೆ. 15 : ರೈಲುಗಳು ಭಾರತದ ಜನರ ಜೀವನಾಡಿ. ದೇಶಾದ್ಯಂತ ಸಾರಿಗೆ ಸಂಪರ್ಕ ನಿರ್ವಹಣೆಯಲ್ಲಿ ಭಾರತೀಯ ರೈಲ್ವೆಯ ಪಾತ್ರ ಮಹತ್ತರವಾಗಿದೆ ಎಂದು ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಹೇಳಿದರು.

ನಗರದ ರೈಲುಗಾಲಿ ಕಾರ್ಖಾನೆಯಲ್ಲಿ ನೂತನ ಅನಿಲ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಇಪ್ಪತ್ತೈದು ವರ್ಷಗಳಲ್ಲಿ ರೈಲು ಗಾಲಿ ಕಾರ್ಖಾನೆಯ ಅಪೂರ್ವ ಸಾಧನೆ ಮಾಡಿದೆ. ಕಾರ್ಖಾನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರ ಶ್ರಮವೇ ಇದಕ್ಕೆ ಕಾರಣ ಇಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಖಾನೆಯ ಆವರಣದಲ್ಲಿ ಹೆಚ್ಚಿನ ಗಿಡ ಮರಗಳಿದ್ದು, ಉತ್ತಮ ವಾತಾವರಣವಿದೆ, ಪ್ರಗತಿಯ ಹಾದಿಯಲ್ಲಿ ಉತ್ತಮ ಪರಿಸರ ಕೂಡ ಬಹಳ ಅವಶ್ಯಕ. ಈ ನಿಟ್ಟಿನಲ್ಲಿ ಕಾರ್ಖಾನೆ ಅನುಕರಣೀಯ ಕ್ರಮಕೈಗೊಂಡಿದೆ.

ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಆರ್ ಕೆ ಉಪಾಧ್ಯಾಯ ಮಾತನಾಡಿ, ಕಾರ್ಖಾನೆಯಲ್ಲಿ ಉತ್ಪಾದನಾ ಕಾರ್ಯಕ್ಕೆ ಅಗತ್ಯವಾದ ಅಮ್ಲಜನಕವನ್ನು ಮುಕ್ತ ಮಾರುಕಟ್ಟೆಯಿಂದ ಪಡೆಯಲಾಗುತ್ತಿತ್ತು. ಆದರೆ, ಇದಕ್ಕೆ ದುಬಾರಿ ಹಣ ವೆಚ್ಚ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ 15 ಕೋಟಿ ರುಪಾಯಿ ವೆಚ್ಚದಲ್ಲಿ ನೂತನ ಘಟಕವನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X