ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ : ಅಪಘಾತದಲ್ಲಿ ಮಂಗಳೂರಿನ ಯುವಕನ ಸಾವು

By * ಅಶ್ರಫ್ ಮಂಜ್ರಾಬಾದ್
|
Google Oneindia Kannada News

Mayur Amin
ದಮಾಮ್(ಸೌದಿ ಅರೇಬಿಯಾ) ಫೆ. 10 : ಸೌದಿ ಅರೇಬಿಯಾದ ದಮಾಮ್ - ಜುಬೈಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸೌದಿ ಅರೇಬಿಯಾದ ಪ್ರಮುಖ ಅನಿವಾಸಿ ಮಂಗಳೂರಿಗರ ಸಂಘಟನೆಯಾದ ಮಂಗಳೂರಿಯನ್ ಅಸೋಸಿಯೇಶನ್ ಆಫ್ ಸೌದಿ ಅರೇಬಿಯಾದ ಅಧ್ಯಕ್ಷರಾದ ಮಾಧವ ಅಮೀನ್ ಅವರ ಪುತ್ರ ಮಯೂರ್ ಅಮೀನ್ (24) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಮ್ಮ ನೂತನ ವ್ಯವಹಾರವೊಂದರ ಒಪ್ಪಂದಕ್ಕೆ ಸಹಿ ಹಾಕಲು ಬೆಳಿಗ್ಗೆ ಸುಮಾರು 3 ಗಂಟೆಗೆ ದಮಾಮಿನಲ್ಲಿರುವ ತಮ್ಮ ಮನೆಯಿಂದ ಕಾರಿನಲ್ಲಿ ಜುಬೈಲಿಗೆ ಹೊರಟ ಮಯೂರ್ ಅಮೀನ್ ಜುಬೈಲ್ ತಲುಪಲು ಕೆಲವು ಕಿ.ಮೀ. ದೂರ ಇರುವಂತೆ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟರು.

ಮೃತರು ಮಂಗಳೂರಿಯನ್ ಅಸೋಸಿಯೇಶನ್ ಆಫ್ ಸೌದಿ ಅರೇಬಿಯಾದ (MASA) ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದು ಹಲವಾರು ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮೃತದೇಹವನ್ನು ಜುಬೈಲಿನ ಜನರಲ್ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದ್ದು ದಮಾಮ್ ಮತ್ತು ಜುಬೈಲಿನ ಹಲವಾರು ಸಾಮಾಜಿಕ ಸಂಘಟನೆಗಳ ಪ್ರಮುಖರು ಮತ್ತು ಅಸಂಖ್ಯಾತ ನಾಗರಿಕರು ಆಸ್ಪತ್ರೆಗೆ ಭೇಟಿ ನೀಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X