ಶಾಲಾ ಕಾಲೇಜುಗಳಲ್ಲಿ ಸೆಲ್ ಫೋನ್ ನಿಷೇಧ

ಎಲ್ಲ ಜಿಲ್ಲೆಗಳಲ್ಲಿರುವ ಶಿಕ್ಷಣಾಧಿಕಾರಿಗಳು ಮತ್ತು ಉಪ ಶಿಕ್ಷಣಾಧಿಕಾರಿಗಳಿಗೆ ಸುತ್ತೋಲೆ ರವಾನಿಸಲಾಗಿದ್ದು, ಆದೇಶ ಪಾಲಿಸದ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿಯೂ ಸರಕಾರ ಬೆದರಿಕೆ ಹಾಕಿದೆ. ಈ ಆದೇಶದ ರೀತ್ಯ, ತರಗತಿಯಲ್ಲಿ, ಶಾಲೆಯ ಆವರಣದಲ್ಲಿ ಶಿಕ್ಷಕರು ಫೋನು ಮಾಡುವಂತಿಲ್ಲ ಮತ್ತು ಫೋನ್ ಕರೆಗಳನ್ನು ಸ್ವೀಕರಿಸುವಂತೆಯೂ ಇಲ್ಲ.
ವಿದ್ಯಾರ್ಥಿಗಳೂ ಅಷ್ಟೆ. ಎಲ್ಲರ ಕೈಯಲ್ಲೂ ಒಂದು ಮೊಬೈಲು ಫೋನು. ತರಗತಿಯಲ್ಲಿ ಮೇಷ್ಟ್ರು ಪಾಠ ಮಾಡುತ್ತಿದ್ದರೆ ಹುಡುಗ ಹುಡುಗಿಯರು ಎಂಸ್ಸೆಂಯೆಸ್ ಕಳಿಸುವುದು, ಸದಾ ಸೆಟ್ಟು ನೋಡುವುದರಲ್ಲೇ ಕಾಲಹರಣ ಮಾಡುವುದು ತೀರಾ ಸಾಮಾನ್ಯ ದೃಶ್ಯವಾಗಿದೆ. ಕ್ಲಾಸಿನಲ್ಲಿ ಯಾರದ್ದಾದರೂ ಒಬ್ಬರದು ಸೆಲ್ ಫೋನು ಬಡಿದುಕೊಳ್ಳುತ್ತಿದ್ದರೆ ಅದಕ್ಕೆ ಕ್ಲಾಸ್ ರೂಂ ಅಂತಾರಾ ? ಎನ್ನುವುದು ಸರಕಾರದ ಅಭಿಪ್ರಾಯ.
ಈ ರೀತಿಯ ಆದೇಶ ಹೊಸದೇನಲ್ಲ. ಈ ಮುಂಚೆ ಸೆಲ್ ಫೋನ್ ಬಳಸದಂತೆ ಶಿಕ್ಷಕರಿಗೆ ಸೌಮ್ಯವಾಗಿ ತಿಳಿಯಪಡಿಸಲಾಗಿತ್ತು. ಆದರೆ ಯಾರೂ ಕೇರ್ ಮಾಡದಿರುವುದರಿಂದ ದಂಡಂ ದಶ ಗುಣಂ ಅಸ್ತ್ರ ಪ್ರಯೋಗಿಸಲು ಸರಕಾರ ಗಂಭೀರವಾಗಿ ಚಿಂತಿಸಿದೆ. ಆದರೆ, ಸೆಲ್ ಫೋನ್ ಬಳಸುವ ಅಂದರೆ, ಕಾನೂನು ಉಲ್ಲಂಘಿಸುವ ಶಿಕ್ಷಕರಿಗೆ ಯಾವ ರೀತಿಯ ಶಿಕ್ಷೆ ವಿಧಿಸಲಾಗುತ್ತದೆ ಎಂಬ ಬಗ್ಗೆ ಕಾಗೇರಿ ಅವರ ಬಳಿ ಸ್ಪಷ್ಟ ಉತ್ತರವಿಲ್ಲ. ಪ್ರಾಂಶುಪಾಲರು ಈ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಎಂದು ಅವರು ಹೇಳಿದ್ರು, ಅಷ್ಟೆ.











Click it and Unblock the Notifications