ಮಾಹಿತಿ ಕದ್ದದ್ದಕ್ಕಾಗಿ ಕದ ಮುಚ್ಚಿದ askme.in
ಬೆಂಗಳೂರು,
ಜ. 30 : ಆಸ್ಕ್ ಮಿ ಡಾಟ್ ಇನ್ ಅಂತರ್ಜಾಲ ತಾಣದ ಮುಖಾಂತರ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸದಂತೆ ಮತ್ತು ಯಾವುದೇ ಉತ್ಪನ್ನಗಳಿಗೆ, ಸೇವಾಸಂಸ್ಥೆಗಳಿಗೆ, ವ್ಯಾಪಾರಸ್ಥರಿಗೆ ಮಾಹಿತಿ ನೀಡದಂತೆ ಟಿವಿ18 ಗ್ರೂಪ್ ಆಫ್ ಕಂಪನಿಯ ಅಂಗಸಂಸ್ಥೆಯಾದ ಇನ್ಫೋಮೀಡಿಯಾ18 ಸಂಸ್ಥೆಗೆ ದೆಹಲಿ ಉಚ್ಚ ನ್ಯಾಯಾಲಯ ತಾಕೀತು ಮಾಡಿದೆ. id="toptextpromo">ಪ್ರಾದೇಶಿಕ
ಸರ್ಚ್ ಇಂಜಿನ್ ಜಸ್ಟ್ ಡಯಲ್ ತನ್ನ ಡೇಟಾಬೇಸ್ ನಲ್ಲಿರುವ ಮಾಹಿತಿಯನ್ನು ಕದ್ದು ತನ್ನ ವೆಬ್ ಸೈಟಿನಲ್ಲಿ ಪ್ರಕಟಿಸುತ್ತದೆ ಎಂದು ಇನ್ಫೋಮೀಡಿಯಾ 18 ಸಂಸ್ಥೆ ವಿರುದ್ಧ ದಾವೆ ಹೂಡಿದೆ. ಮುಂದಿನ ವಿಚಾರಣೆ ನಡೆಯುವವರೆಗೆ askme.in ವೆಬ್ ಸೈಟಿನಲ್ಲಿ ಏನನ್ನೂ ಪ್ರಕಟಿಸಬಾರದೆಂದು ನ್ಯಾಯಾಲಯ ಏಕಪಕ್ಷೀಯ ತಡೆಯಾಜ್ಞೆ ನೀಡಿದೆ. id='are-slot-1' class='oiad oi-axt oiadv'> id='top-searched-articles'>ಜಸ್ಟ್
ಡಯಲ್ 14 ವರ್ಷಗಳಿಂದ ಸತತ ಸಂಶೋಧನೆಯಿಂದ ಮಾಹಿತಿ ಕಲೆಹಾಕಿದೆ. ಇನ್ಪೋಮೀಡಿಯಾನಿಂದಾಗಿರುವ ಕಾಪಿರೈಟ್ ಉಲ್ಲಂಘನೆ ಸೈಬರ್ ಕ್ರೈಂನ ಒಂದು ರೂಪವಾಗಿದ್ದು, ಜಸ್ಟ ಡಯಲ್ ಗೆ ಇದು ದಕ್ಕಿದ ಜಯ ಎಂದು ಕಂಪನಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.











Click it and Unblock the Notifications