ಸಾನಿಯಾ ಮಿರ್ಜಾ ನಿಶ್ಚಿತಾರ್ಥ ರದ್ದು

ಸೊಹ್ರಾಬ್ ನನ್ನ ಬಾಲ್ಯದ ಸ್ನೇಹಿತ. ಆದರೆ ನಿಶ್ಚಿತಾರ್ಥದ ಸಮಯದಲ್ಲಿ ನಮ್ಮ ನಡುವೆ ಹೊಂದಾಣಿಕೆ ಕಂಡು ಬಂದಿರಲಿಲ್ಲ. ಸೊಹ್ರಾಬ್ ನ ಮುಂದಿನ ಜೀವನ ಸುಖಕರವಾಗಿರಲಿ ಎಂದು ಆಶಿಸುತ್ತೇನೆ ಎಂದು ಸಾನಿಯಾ ಹೇಳಿಕೆ ನೀಡಿದ್ದಾರೆಂದು 'ದಿ ಇಕಾನಾಮಿಕ್ ಟೈಮ್ಸ್ ' ಪತ್ರಿಕೆ ವರದಿ ಮಾಡಿದೆ. ಸಾನಿಯಾ ತಂದೆ ಕೂಡ ನಿಶ್ಚಿತಾರ್ಥ ಮುರಿದು ಬಿದ್ದಿರುವುದನ್ನು ಖಚಿತ ಪಡಿಸಿದ್ದರೆನ್ನಲಾಗಿದೆ.
ವಿಡಿಯೋ:ಮೂಗುತಿ ಸುಂದರಿ ಸಾನಿಯಾ ನಿಶ್ಚಿತಾರ್ಥ ರದ್ದು
ಸಾನಿಯಾ ಮತ್ತು ಸೊಹ್ರಾಬ್ ಹಲವು ವರ್ಷಗಳಿಂದ ಸ್ನೇಹಿತರು. ಸದ್ಯ ಸೊಹ್ರಾಬ್ ಬ್ರಿಟನ್ ನಲ್ಲಿ ಉನ್ನತ ವಿದ್ಯಾಭ್ಯಾಸದಲ್ಲಿ ತೊಡಗಿರುವ ಅವರ ನಡುವಿನ ಸಂಬಂಧ ಹಳಸಲು ಸ್ಪಷ್ಟ ಕಾರಣಗಳೆನೆಂದು ತಿಳಿದು ಬಂದಿಲ್ಲ. ಸದ್ಯ ಮೇಲ್ಬೋರ್ನ್ ನಲ್ಲಿರುವ ಸಾನಿಯಾ, ಆಸ್ಟ್ರೇಲಿಯಾ ಓಪನ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಮುಂದೆ ಫೆಡ್ ಕಪ್ ಏಷ್ಯಾ ಓಷ್ಯಾನಿಯಾ ಗುಂಪಿನ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications