ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರ್ಮಿಕ ಕೇಂದ್ರಗಳಿಗೆ ಭದ್ರತೆ ಸಾಧ್ಯವಿಲ್ಲ: ಆಚಾರ್ಯ

By Mahesh
|
Google Oneindia Kannada News

VS Acharya
ಬೆಂಗಳೂರು, ಜ. 27: ರಾಜ್ಯದ ಎಲ್ಲಾ ಧಾರ್ಮಿಕ ಮಂದಿರಗಳಿಗೆ ಭದ್ರತೆ ಒದಗಿಸುವುದು ಅಸಾಧ್ಯವಾದ ಮಾತು. ಮಂದಿರ, ಚರ್ಚ್, ಮಸೀದಿಯವರು ತಮ್ಮದೇ ಆದ ಸ್ವಂತ ಭದ್ರತಾ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ ಎಂದು ಕರ್ನಾಟಕದ ಗೃಹ ಸಚಿವ ಡಾ. ವಿಎಸ್ ಆಚಾರ್ಯ ಅವರು ಹೇಳಿದ್ದಾರೆ.

ಆಚಾರ್ಯ ಅವರ ಲೆಕ್ಕಾಚಾರ ಹೀಗಿದೆ: ರಾಜ್ಯದಲ್ಲಿ ಸುಮಾರು 1,25ಕೋಟಿ ಮನೆಗಳಿವೆ. 43 ಸಾವಿರ ದೇವಾಲಯಗಳಿವೆ. 3 ಸಾವಿರ ಚರ್ಚ್ ಗಳಿವೆ. 3 ಸಾವಿರ ಮಸೀದಿಗಳಿವೆ. ಸುಮಾರು 90 ಸಾವಿರ ಪೊಲೀಸ್ ಪಡೆ ಇದೆ. ಯಾರೋ ಕಿಡಿಗೇಡಿಗಳು ಮಾಡುವ ದುಷ್ಕೃತ್ಯಕ್ಕೆ ಸುಮ್ಮನೆ ರಾಜಕೀಯ ಲೇಪನ ಮಾಡಿ ಕಿಚ್ಚು ಎಬ್ಬಿಸುವುದರಲ್ಲಿ ಅರ್ಥವಿಲ್ಲ.

ಚರ್ಚ್ ಅಷ್ಟೇ ಅಲ್ಲ ಮಂದಿರಗಳು, ಪುರಾತನ ದೇಗುಲಗಳಲ್ಲಿ ನಿಧಿಗಾಗಿ ಪ್ರತಿಮೆಗಳನ್ನು ಒಡೆದು ಹಾಕಿದ ಅನೇಕ ಉದಾಹರಣೆಗಳಿವೆ. ಆಡಳಿತ ಪಕ್ಷವನ್ನು ದೂರುವ ಬದಲು, ಕಿಡಿಗೇಡಿಗಳ ಪತ್ತೆಗೆ ಪ್ರತಿಪಕ್ಷಗಳು ಸಹಕರಿಸಿದರೆ ಒಳಿತು ಎಂದು ಆಚಾರ್ಯ ಕಿಡಿಕಾರಿದ್ದಾರೆ.

ಗೋಹತ್ಯೆ ನಿಷೇಧ ಕಾಯ್ದೆ: ಸಂವಿಧಾನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೆ ಸಹಮತವಾದ ಅಂಶಗಳಿವೆ. ಜಮ್ಮು ಕಾಶ್ಮೀರ, ಉತ್ತರಪ್ರದೇಶ, ಗುಜರಾತಿನಲ್ಲಿ ಈಗಾಗಲೇ ಗೋಹತ್ಯೆ ನಿಷೇಧಿಸಿ ಮಸೂದೆ ಮಂಡಿಸಲಾಗಿದೆ. ಈ ವಿಷಯವನ್ನು ಕೆದಕುವ ಮೊದಲು ಯೋಚಿಸಬೇಕು ಎಂದು ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕಿ ಮೋಟಮ್ಮ ಅವರಿಗೆ ಪರೋಕ್ಷವಾಗಿ ಆಚಾರ್ಯ ಹೇಳಿದರು .

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X