ವಿಪ್ರೋ ತ್ರೈಮಾಸಿಕ : 1,217 ಕೋ ನಿವ್ವಳ ಲಾಭ
ಮುಂಬೈ,
ಜ. 20 : ಭಾರತದ ಮೂರನೇ ಅತಿದೊಡ್ಡ ಸಾಫ್ಟ್ ವೇರ್ ಕಂಪನಿ ಬೆಂಗಳೂರು ಮೂಲದ ವಿಪ್ರೋ ಸಾಫ್ಟವೇರ್ ಕಂಪನಿಯು 2009ರ ತ್ರೈಮಾಸಿಕ ವರದಿಯನ್ನು ಮಂಗಳವಾರ ಪ್ರಕಟಿಸಿದೆ. ಶೇ. 21.26ರಷ್ಟು ಅಂದರೆ 1,217.4 ಕೋಟಿ ರುಪಾಯಿಗಳ ನಿವ್ವಳ ಲಾಭದೊಂದಿಗೆ ಕಂಪನಿಯು ಸುಸ್ಥಿತಿಯನ್ನು ಕಾಯ್ದುಕೊಂಡಿದೆ. id="toptextpromo">2009ರ
ಅಕ್ಟೋಬರ್ ನಿಂದ ಡಿಸೆಂಬರ್ 31ರ ವರೆಗೆ ಒಟ್ಟು 7,055.8 ಕೋಟಿ ರುಪಾಯಿಗಳ ವ್ಯವಹಾರ ಮಾಡಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 6,773 ಕೋಟಿ ರುಪಾಯಿಗಳ ವ್ಯವಹಾರ ಮಾಡಲಾಗಿತ್ತು ಎಂದು ಮುಂಬೈ ಷೇರು ಪೇಟೆಗೆ ಸಲ್ಲಿಸಿದ ವರದಿಯಲ್ಲಿ ಇದನ್ನು ಪ್ರಸ್ತಾಪಿಸಲಾಗಿದೆ. ಈ ವರ್ಷ 31 ಹೊಸ ಗ್ರಾಹಕರು ಕಂಪನಿಗೆ ಸೇರ್ಪೆಯಾಗಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ವ್ಯವಹಾರ ನಡೆಸುವುದಾಗಿ ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. id='are-slot-1' class='oiad oi-axt oiadv'> id='top-searched-articles'>2008-09
ನೇ ಆರ್ಥಿಕ ವರ್ಷದ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ 1,003.9 ಕೋಟಿ ರುಪಾಯಿಯಷ್ಟು ನಿವ್ವಳ ಲಾಭ ಗಳಿಸಿತ್ತು. 2008ರ ಅಕ್ಟೋಬರ್ ನಿಂದ ಡಿಸೆಂಬರ್ 31ರ ವರೆಗೆ ಒಟ್ಟು 6,773 ಕೋಟಿ ರುಪಾಯಿಗಳ ವ್ಯವಹಾರ ನಡೆಸಲಾಗಿತ್ತು.











Click it and Unblock the Notifications