ಬಿಜೆಪಿಗೆ ಸೋಲು : ಗುಪ್ತಚರ ಇಲಾಖೆ
ಬೆಂಗಳೂರು,
ಜ. 20 : ಬಿಬಿಎಂಪಿ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಲಿದೆ ಎಂದು ಗುಪ್ತಚರ ಇಲಾಖೆ ಸರಕಾರಕ್ಕೆ ವರದಿ ನೀಡಿದೆ ಎನ್ನಲಾಗಿದೆ. ಈ ವರದಿಯನ್ನೇ ಕುಂಟು ನೆಪ ಮಾಡಿಕೊಂಡು ಚುನಾವಣೆ ಮುಂದೂಡುವ ಪ್ರಯತ್ನವನ್ನು ಬಿಜೆಪಿ ಶಾಸಕರು ಮತ್ತು ಸಚಿವರು ನಡೆಸುತ್ತಿದ್ದು, ಅದಕ್ಕೂ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಿದ್ದರಿಂದ ಬಿಜೆಪಿಗೆ ತೀವ್ರ ನಿರಾಶೆ ಉಂಟು ಮಾಡಿದೆ. id="toptextpromo">ರಾಜ್ಯದಲ್ಲಿ
ಅಧಿಕಾರದಲ್ಲಿರುವಾಗ ಬಿಬಿಎಂಪಿಯನ್ನು ತನ್ನ ತೆಕ್ಕೆಗೆ ಹಾಕಿಕೊಳ್ಳದಿದ್ದರೆ ಪಕ್ಷ ಹಾಗೂ ಸರಕಾರಕ್ಕೆ ಮುಖಭಂಗ ಖಚಿತ. ಆದುದರಿಂದ ಶತಾಯುಗತಾಯು ಗೆಲ್ಲಲೇಬೇಕೆಂಬ ಒತ್ತಡವನ್ನು ಸಚಿವರು ಮತ್ತು ಶಾಸಕರ ಮೇಲೆ ಹೇರಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ಮತ್ತು ಬೆಳಗಾವಿ ಮಹಾನಗರಪಾಲಿಕೆ ಅಧಿಕಾರ ಹಿಡಿದಿರುವ ಬಿಜೆಪಿಗೆ ಬಿಬಿಎಂಪಿ ಪ್ರತಿಷ್ಟೆಯ ಪ್ರಶ್ನೆಯಾಗಿದ್ದು ಅಧಿಕಾರ ಹಿಡಿಯಬೇಕೆಂಬುದು ಪಕ್ಷದ ಏಕೈಕ ಗುರಿ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>198ವಾರ್ಡ್
ಗಳ ಪೈಕಿ ಬಿಜೆಪಿ 70 -80 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ 70 ಸ್ಥಾನ ದಕ್ಕಬಹುದು. ಒಂದು ವೇಳೆ ಹೊಂದಾಣಿಕೆ ಏರ್ಪಡದಿದ್ದರೆ ಬಿಜೆಪಿಗೆ 80 -90 ಸ್ಥಾನ ದಕ್ಕಬಹುದು ಎಂದು ಗುಪ್ತಚರ ದಳ ಮಾಹಿತಿ ನೀಡಿದೆ. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಎಷ್ಟು ಸ್ಥಾನಗಳು ಸಿಗಲಿವೆ ಎನ್ನುವುದು ಸ್ಪಷ್ಟವಾಗಿಲ್ಲ.











Click it and Unblock the Notifications