ಜೂನ್ 2 ರಿಂದ ಇಂಡಿಯಾ ಬಯೋಮೇಳ
ಬೆಂಗಳೂರು,
ಜ. 20 : ಮಾಹಿತಿ ತಂತ್ರಜ್ಞಾನದೊಂದಿಗೆ ಜೈವಿಕ ತಂತ್ರಜ್ಞಾನಕ್ಕೂ ಹೆಸರುವಾಸಿಯಾದ ಬೆಂಗಳೂರು 10 ನೇ ಬಯೋ ಮೇಳಕ್ಕೆ ಸಜ್ಜಾಗಿದ್ದು, ಜೂನ್ 2 ರಿಂದ 4ರವರೆಗೆ ಬೆಂಗಳೂರು ಬಯೋ ಮೇಳ 2010 ಅಂತಾರಾಷ್ಟ್ರೀಯ ಮೇಳ ನಡೆಯಲಿದೆ. id="toptextpromo">ಮೇಳಕ್ಕೆ
ಹೋಟೆಲ್ ಲಲಿತ್ ಅಶೋಕ್ ವೇದಿಕೆಯಾಗಲಿದೆ. ಸರಕಾರದ ಐಟಿ, ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಸೇರಿದಂತೆ ವಿಷನ್ ಗ್ರೂಪ್ ಆನ್ ಬಯೋಟೆಕ್ನಾಲಜಿ ಮತ್ತು ಎಂಎಂ ಆಕ್ವಿವ್ ಸೈಟೆಕ್ ಕಮ್ಯುನಿಕೇಷನ್ ನ ಅಶ್ರಯದಲ್ಲಿ ಮೇಳ ನಡೆಯಲಿದೆ. ಜೈವಿಕ ತಂತ್ರಜ್ಞಾನ ಅಧ್ಯಯನ ಉದ್ಯೋಗ ಸೃಷ್ಟಿಗೆ ರಾಜ್ಯದ ನಾನಾ ಭಾಗದ 10 ಶೈಕ್ಷಣಿಕ ಸಂಸ್ಥೆಗಳಲ್ಲಿ ಬಿಟಿ ಶಾಲೆ ತೆರೆಯಲಾಗುವುದು. id='are-slot-1' class='oiad oi-axt oiadv'> id='top-searched-articles'>ಈಗಾಗಲೇ
ಜೈವಿಕ ತಂತ್ರಜ್ಞಾನ ವಿಷಯ ಬೋಧಿಸುತ್ತಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಾಲೆ ಆರಂಭಿಸುವುದು ನಮ್ಮ ಉದ್ದೇಶ. ಇವುಗಳಿಗೆ ತಲಾ 1 ಕೋಟಿ ರುಪಾಯಿ ಅನುದಾನ ಸರಕಾರ ಘೋಷಿಸಿದೆ. 10 ಶಾಲೆಗಳ ಪಟ್ಟಿ ಮತ್ತು ಯಾವ ಕೋರ್ಸ್ ಆರಂಭಿಸಲಾಗುತ್ತದೆ ಎಂಬುದನ್ನು ಮೇಳದಲ್ಲಿ ಪ್ರಕಟಿಸಲಾಗುವುದು ಎಂದು ಕಿರಣ್ ಮುಜಮ್ ದಾರ್ ಶಾ ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.











Click it and Unblock the Notifications