ನಕಲಿ ಇ ಮೇಲ್ ಬಗ್ಗೆ ಎಚ್ಚರ ವಹಿಸಲು ಸೂಚನೆ
ನವದೆಹಲಿ,
ಜ.16: ಅಂತರ್ಜಾಲದಲ್ಲಿ ಬರುವ ನಕಲಿ ಇ-ಮೇಲ್ ಗಳಿಗೆ ಪಾನ್ ಕಾರ್ಡ್ ಸಂಖ್ಯೆ ಹಾಗೂ ಕ್ರೆಡಿಟ್ ಕಾರ್ಡ್ ನ ಯಾವುದೇ ವಿವರಗಳನ್ನು ನೀಡದಿರುವಂತೆ ತೆರಿಗೆದಾರರಿಗೆ ತೆರಿಗೆ ಇಲಾಖೆ ಎಚ್ಚರಿಸಿದೆ. id="toptextpromo">'ತೆರಿಗೆ
ಮರುಪಾವತಿ' ಹಾಗೂ 'ಮರುಪಾವತಿಗೆ ಮನವಿ' ಎಂಬ ತಲೆಬರಹದಡಿ ಹಲವು ನಕಲಿ ಇ ಮೇಲ್ ಗಳು ಬರುತ್ತಿರುವ ಹಿನ್ನೆಲೆಯಲ್ಲಿ ತೆರಿಗೆ ಇಲಾಖೆ ಈ ಸೂಚನೆಯನ್ನು ನೀಡಿದೆ. ಈ ರೀತಿಯ ನಕಲಿ ಇ ಮೇಲ್ ಗಳ ಬಗ್ಗೆ ತೆರಿಗೆದಾರರು ಎಚ್ಚರವಹಿಸಬೇಕು ಎಂದು ತೆರಿಗೆ ಅಧಿಕಾರಿಗಲು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'> [email protected] ಮತ್ತು [email protected] ಎಂಬ ವಿಳಾಸಗಳಿಂದ ಬಂದ ಇ ಮೇಲ್ ಗಳಿಗೆ ಉತ್ತರಿಸದಿರುವಂತೆ ಎಚ್ಚರಿಕೆ ನೀಡಲಾಗಿದೆ. ಮರುಪಾವತಿ ಕುರಿತು ತೆರಿಗೆ ಇಲಾಖೆ ಯಾರಿಗೂ ಇ ಮೇಲ್ ಗಳನ್ನು ಕಳುಹಿಸುವುದಿಲ್ಲ. ತೆರಿಗೆದಾರರಿಂದ ಅವರ ಪಾನ್ ಸಂಖ್ಯೆಯಾಗಲಿ, ಕ್ರೆಡಿಟ್ ಕಾರ್ಡ್ ನ ವಿವರಗಳಾಗಲಿ ಕೇಳುವುದಿಲ್ಲ ಎಂದು ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ.











Click it and Unblock the Notifications