ಮಗು ಶಾಲೆಯಲ್ಲಿ ಏನು ಮಾಡುತ್ತಿದೆ?
ಬೆಂಗಳೂರು,
ಜ. 11 : ತಮ್ಮ ಮಕ್ಕಳು ಶಾಲೆಯಲ್ಲಿ ಏನು ಕಲಿಯುತ್ತಿದ್ದಾರೆ, ಹೇಗೆ ಕಲಿಯುತ್ತಿದ್ದಾರೆ, ಅವರ ವಿದ್ಯಾಭ್ಯಾಸ ಹೇಗೆ ಸಾಗುತ್ತಿದೆ ಎನ್ನುವುದನ್ನು ತಂದೆತಾಯಿ ತಿಳಿದುಕೊಳ್ಳಲು ನೆರವಾಗುವ ಅಂತರ್ಜಾಲ ತಾಣವೊಂದು ಸಿದ್ಧವಾಗಿದೆ. ಮುಖ್ಯವಾಗಿ ಉದ್ಯೋಗಸ್ಥ ತಂದೆತಾಯಿಯರಿಗೆ ಈ ತಾಣ ನೆರವಾಗುತ್ತದೆ. id="toptextpromo">ಮಕ್ಕಳ
ವಿದ್ಯಾಭ್ಯಾಸದ ಬಗೆಗೆ ನಿಗಾ ಇಡಲು ಬಯಸುವ ಪೋಷಕರಿಗೆ ಇದು ಅನುಕೂಲವಾಗುತ್ತದೆ. ಪೋಷಕರು ಎಲ್ಲೇ ಇದ್ದರೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಗಳನ್ನು ವೆಬ್ ಸೈಟ್ ಮೂಲಕ ತಿಳಿಯಬಹುದು. ನರ್ಸರಿ ಶಾಲೆಯಿಂದ ಮೊದಲುಗೊಂಡು ಕಾಲೇಜು ವಿದ್ಯಾರ್ಥಿಗಳವರೆಗೆ ಈ ತಾಣ ಮಾಹಿತಿ ಪೂರೈಸುತ್ತದೆ. ಶಾಲೆ ಮತ್ತು ಕಾಲೇಜು ಆಡಳಿತ ವರ್ಗದವರು ತಮ್ಮ ಸಂಸ್ಥೆಯನ್ನು ಈ ತಾಣದೊಂದಿದೆ ನೊಂದಾವಣೆ ಮಾಡಿಕೊಳ್ಳುವುದು ಅಗತ್ಯ. id='are-slot-1' class='oiad oi-axt oiadv'> id='top-searched-articles'>ತಾಣ
ಒದಗಿಸುವ ಅನೇಕಾರು ಸೌಲಭ್ಯಗಳಲ್ಲಿ ಮುಖ್ಯವಾದುದೆಂದರೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಆನ್ ಲೈನ್ ಚಾಟ್ ಮಾಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಬಹುದು. ವೆಬ್ ಸೈಟಿನೊಂದಿಗೆ ನೊಂದಾವಣೆ ಮಾಡಿಕೊಳ್ಳುವ ಶಾಲಾ ಕಾಲೇಜುಗಳಿಗೆ ಶುಲ್ಕ ಹಾಗೂ ಶುಲ್ಕರಹಿತ ಸೌಲಭ್ಯಗಳಿರುತ್ತವೆ.











Click it and Unblock the Notifications