ಶ್ರೀವತ್ಸ ಜೋಶಿ ಪರಾಗಸ್ಪರ್ಶ ಶನಿವಾರ ಬಿಡುಗಡೆ

Srivatsa Joshi
ಬೆಂಗಳೂರು, ಡಿ.31: ಹೊಸವರ್ಷಕ್ಕೆ ಉದಯಿಸುವ ಹೊಸ ಹರುಷದ ಹೂಗಳಿಗೆ ಒಲವಿನಿಂದ, ನಲಿವಿನಿಂದ ಪರಾಗಸ್ಪರ್ಶ ನೀಡಲು ಕರಾವಳಿ ಮೂಲ + ಅಮೆರಿಕಾ ನೆಲದ ಸಿರಿಪುತ್ರ ಜೋಶಿ ಅವರು ಭಾರತಕ್ಕೆ ಬಂದಿದ್ದಾರೆ. ದಟ್ಸ್ ಕನ್ನಡದಲ್ಲಿ ಐದು ವರ್ಷಕ್ಕೂ ಮಿಕ್ಕು ಅಂಕಣ(ವಿಚಿತ್ರಾನ್ನ) ಬರೆದು ದಾಖಲೆ ಬರೆದ ಇವರು ಈಗ ವಿಜಯಕರ್ನಾಟಕದಲ್ಲಿ ಪ್ರಕಟಗೊಂಡ 'ಪರಾಗಸ್ಪರ್ಶ' ಅಂಕಣ ಲೇಖನಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. "ಒಲವಿನ ಟಚ್" ಮತ್ತು "ನಲಿವಿನ ಟಚ್" - ಪರಾಗಸ್ಪರ್ಶ ಅಂಕಣ ಬರಹಗಳ ಎರಡು ಪುಸ್ತಕಗಳ ಅನಾವರಣವನ್ನು ಹಿರಿಯ ರಂಗಭೂಮಿ ನಟ ಮಾಸ್ಟರ್ ಹಿರಣ್ಣಯ್ಯ ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ವಿವರಗಳು ಇಂತಿದೆ:

ಪುಸ್ತಕಗಳ ಪ್ರಕಾಶಕರು: ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು
ಸ್ಥಳ :ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ,ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು.
ದಿನಾಂಕ/ಸಮಯ: ಶನಿವಾರ ಜನವರಿ 2, 2010 ರಂದು 10:30ರಿಂದ 12:00ರವರೆಗೆ
ಲಘು ಉಪಾಹಾರ : ಬೆಳಿಗ್ಗೆ 9:30ಕ್ಕೆ
ಅತಿಥಿಗಳು: ಜಯಂತ ಕಾಯ್ಕಿಣಿ, ಮಾಸ್ಟರ್ ಹಿರಣ್ಣಯ್ಯ, ವಿಶ್ವೇಶ್ವರ ಭಟ್, ಜನಾರ್ದನ ಸ್ವಾಮಿ,

ಹೆಚ್ಚಿನ ವಿವರಗಳಿಗೆ ಶ್ರೀವತ್ಸ ಜೋಷಿ ಅವರ ಇಂಡಿಯ ಸೆಲ್ : 99163 87452

ಅವರ ಇ ಮೇಲ್ ವಿಳಾಸ ಎಂದಿನಂತೆ : [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+