ಗೃಹಿಣಿಗೆ ಅಶ್ಲೀಲ ಚಿತ್ರ ರವಾನೆ, ಒಬ್ಬ ಬಂಧನ
ಬೆಂಗಳೂರು,
ಡಿ. 24 : ಆರ್ಕುಟ್ , ಸೋಷಿಯಲ್ ನೆಟ್ ವರ್ಕ್ ನಲ್ಲಿ ಗೃಹಣಿಯೊಬ್ಬರಿಗೆ ನಕಲಿ ಐಡಿ ಮೂಲಕ ಅಶ್ಲೀಲ ಚಿತ್ರಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. id="toptextpromo">ಚೆನ್ನೈನ
ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಾದ್ ರಾವ್ ಬಂಧಿತ ಆರೋಪಿ. ಸೋಷಿಯಲ್ ನೆಟ್ ವರ್ಕ್ ಆರ್ಕುಟ್ ನಲ್ಲಿ ಗೃಹಿಣಿಗೆ ಪ್ರಸಾದ್ ರಾವ್ ಪದೆಪದೇ ಅಶ್ಲೀಲ ಚಿತ್ರಗಳನ್ನು ರವಾನಿಸುತ್ತಿದ್ದ ಜೊತೆಗೆ ಲೈಂಗಿಕತೆಗೂ ಪೀಡಿಸುತ್ತಿದ್ದ ಎಂದು ಗೃಹಿಣಿ ಸೈಬರ್ ಪೊಲೀಸ್ ಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಬಂಧನಕ್ಕೆ ಜಾಲ ಬೀಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆರೋಪಿ
ಪ್ರಸಾದ್ ರಾವ್ ನಿಂದ ಒಂದು ಲ್ಯಾಪ್ ಟಾಪ್ ವಶಪಡಿಸಿಕೊಂಡಿದ್ದು, ನಕಲಿ ಐಡಿ ಪತ್ತೆ ಹಚ್ಚಿದ್ದಾರೆ. ಆರೋಪಿ ಪ್ರಸಾದ್ ರಾವ್ ವಿರುದ್ಧ ರಾಮನಗರದ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣವೂ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.











Click it and Unblock the Notifications