ದುಬೈನಲ್ಲಿ ಇಡೀ ಕುಟುಂಬ ಆತ್ಮಹತ್ಯೆ

NRI family commits suicide in Dubai
ದುಬೈ, ಡಿ. 17: ಆರ್ಥಿಕ ಮುಗ್ಗಟ್ಟನ್ನು ಎದುರಿಸಲಾಗದೆ ತತ್ತರಿಸಿದ ಭಾರತೀಯ ಮೂಲದ ಒಂದು ಅನಿವಾಸಿ ಕುಟುಂಬ ಗುರುವಾರ ದುಬೈನಲ್ಲಿ ಆತ್ಮಹತ್ಯೆಗೆ ಶರಣಾಗಿದೆ.

ಕುಟುಂಬದ ಮೂರು ಸದಸ್ಯರು ಸಾವಿಗೆ ಶರಣಾದರೆ ಪತಿ ಸಾವಿನಂಚಿನಿಂದ ಪಾರಾಗಿದ್ದಾನೆ. ನೇಣು ಬಿಗಿದುಕೊಂಡು ಸಾವಿಗೆ ಯತ್ನಿಸಿದ್ದ ಆತ ಬದುಕಿ ಉಳಿದಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ವೃತ್ತಿ ಬಿಸಿನೆಸ್.

ಆದರೆ ಆತನ 38 ವಯೋಮಾನದ ಪತ್ನಿ, ಮೊದಲ ಮದುವೆಯಿಂದ ಆಕೆಗೆ ಜನಿಸಿದ 22 ವರ್ಷದ ಮಗ ಮತ್ತು 20 ವರ್ಷದ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ಲುಲು ಮಾರ್ಕೆಟ್ಟಿನ ಎದುರಿಗಿರುವ ಕರಾಮ ನಿವಾಸದಲ್ಲಿ ಸಂಭವಿಸಿದೆ. ಆತ್ಮಹತ್ಯೆಗೆ ಹಣಕಾಸು ಬಿಕ್ಕಟು ಕಾರಣ ಎಂದು ಅವರು ಮರಣ ಪತ್ರದಲ್ಲಿ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+