ಇನ್ಫಿ : 13 ಸಾವಿರ ಉದ್ಯೋಗಿಗಳ ಬೇಟೆ ಶುರು

ಈ ಕುರಿತು ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆಯೊಂದಿಗೆ ಮಾತನಾಡಿದ ಕಂಪನಿಯ ಉಪಾಧ್ಯಕ್ಷೆ ನಂದಿತಾ ಗುರ್ಜಾರ್, ಈ ವರ್ಷದ ಉದ್ಯೋಗ ನೇಮಕ ಪ್ರಕ್ರಿಯೆಗಳು ಮುಗಿದಿವೆ. ಈ ವರ್ಷದಲ್ಲಿ 18 ಸಾವಿರ ಹೊಸಬರು ಮತ್ತು 3,500 ಅನುಭವಿ ಉದ್ಯೋಗಿಗಳು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. 2010-11ರ ಸಾಲಿನಲ್ಲಿ ಸುಮಾರು 13 ಸಾವಿರ ಉದ್ಯೋಗಿಗಳ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದ್ದು, ಕ್ಯಾಂಪಸ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಇದಕ್ಕಾಗಿ ದೇಶದ 700 ಕಾಲೇಜುಗಳಲ್ಲಿ ಕ್ಯಾಂಪಸ್ ಸಂದರ್ಶನ ಆರಂಭಿಸಲಾಗಿದೆ ಎಂದು ನಂದಿತಾ ಗುರ್ಜಾರ್ ವಿವರಿಸಿದ್ದಾರೆ.
ಇತ್ತೀಚೆಗೆ ವಿಪ್ರೋ ಕಂಪನಿ ಕೂಡ ಸುಮಾರು 5 ಸಾವಿರ ಇಂಜಿನಿಯರಿಂಗ್ ಮತ್ತು ಇಂಜಿನಿಯರಿಂಗ್ ಯೇತರ ಉದ್ಯೋಗಿಗಳ ನೇಮಕಾತಿಯನ್ನು ಮುಂದಿನ ಎರಡು ತಿಂಗಳೊಳಗೆ ನಡೆಸಲಾಗುವುದು ಎಂದು ಹೇಳಿಕೆ ನೀಡಿತ್ತು.
(ಏಜನ್ಸೀಸ್)












Click it and Unblock the Notifications