ಮೈಸೂರು ಬಸವಣ್ಣ ಅವರಿಗೆ ಕಂರ್ಗಾಟ್ಸ್

ಅನುರಾಗ್ ಬಸವರಾಜ್ ಸೆರೆ ಹಿಡಿದ ಬುಶ್ ಶಾಟ್ ಎನ್ನುವ ಹಕ್ಕಿ ಆಹಾರ ಸೇವನೆ ಮಾಡುತ್ತಿದ್ದ ಛಾಯಾಚಿತ್ರಕ್ಕೆ ನೇಚರ್ ವಿಭಾಗದಲ್ಲಿ ಈ ಪದಕ ಲಭಿಸಿದೆ. ಇದಲ್ಲದೇ ಫೋಟೋ ಜರ್ನಲಿಸಂ ವಿಭಾಗದಲ್ಲಿನ ಮತ್ತೊಂದು ಫೋಟೋಕ್ಕೆ ಅತ್ಯುತ್ತಮ ಫೋಟೋ ಸರ್ಟಿಫಿಕೇಟ್ ಕೂಡ ಲಭಿಸಿದೆ.
ಗುಜರಾತಿನ ಅಹಮದಾಬಾದ್‌ನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚು ದೇಶಗಳ 600 ಕ್ಕೂ ಹೆಚ್ಚು ಛಾಯಾಗ್ರಾಹಕರು ಪಾಲ್ಗೊಂಡಿದ್ದರು. ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರೂ ಆಗಿರುವ ಬಸವರಾಜ್ ಅವರನ್ನು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಛಾಯಾಚಿತ್ರಕಲೆಯನ್ನು ಆಸ್ವಾದಿಸುವ ಅನೇಕರು ಅಭಿನಂದಿಸಿದ್ದಾರೆ.
(ದಟ್ಸ್ ಕನ್ನಡವಾರ್ತೆ)












Click it and Unblock the Notifications