ವಿಪ್ರೋದಲ್ಲಿ 8,000 ಹುದ್ದೆಗಳಿಗೆ ಆಹ್ವಾನ

ವಿಪ್ರೋ ಐಟಿ ಜಂಟಿ ಮುಖ್ಯಕಾರ್ಯನಿರ್ವಾಹಕ ಗಿರೀಶ್ ಪರಾಂಜಪೆ ಈ ಕುರಿತು ಸ್ಪಷ್ಟಪಡಿಸಿದ್ದು, ಎರಡು ತಿಂಗಳೊಳಗೆ 5,000 ಉದ್ಯೋಗಿಗಳಿಗೆ ಕೆಲಸ ನೀಡಲಾಗುವುದು. ಮುಖ್ಯವಾಗಿ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗಿಗಳನ್ನು ಆಯ್ಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ಶೇ. 40 ರಷ್ಟು ಇಂಜಿನಿಯರಿಂಗ್ ಹಾಗೂ ಶೇ. 60 ರಷ್ಟು ಇಂಜಿನಿಯರೇತರರನ್ನು ಆಯ್ಕೆಮಾಡಲಾಗುವುದು ಎಂದರು.
ಬೆಂಗಳೂರಿನಲ್ಲಿರುವ ಕಂಪನಿಗೆ 5,000 ಉದ್ಯೋಗಿಗಳು ಮತ್ತು 3,000 ಉದ್ಯೋಗಿಗಳನ್ನು ದೇಶದ ಇತರೆ ಶಾಖೆಗಳಲ್ಲಿ ಕೆಲಸ ನೀಡಲಾಗುವುದು. ಮುಂದಿನ ವರ್ಷದ ಜೂನ್ ವೇಳೆಗೆ ಈ ಎಲ್ಲ ಉದ್ಯೋಗಿಗಳು ಕೆಲಸಕ್ಕೆ ಹಾಜರಾಗುವರು ಎಂದು ಪರಾಂಜಪೆ ಹೇಳಿದರು. ಇನ್ಫೋಸಿಸ್, ಟಿಸಿಎಸ್ ಹಾಗೂ ಹಲವು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಹೈರಿಂಗ್ ಆರಂಭವಾಗಿದೆ.
(ಏಜನ್ಸೀಸ್)












Click it and Unblock the Notifications