Get Updates
Get notified of breaking news, exclusive insights, and must-see stories!

ದತ್ತ ಪೀಠವನ್ನು ಬಾಬ್ರಿ ಮಾಡಲು ಹೊರಟ ಬಿಜೆಪಿ

YSV Datta
ಬೆಂಗಳೂರು, ಡಿ. 2 : ದತ್ತಪೀಠ ಬಾಬಾ ಬುಡನ್ ಗಿರಿಯನ್ನು ದಕ್ಷಿಣ ಭಾರತದ ಬಾಬ್ರಿ ಮಸೀದಿ ಮಾಡಲು ಬಿಜೆಪಿ ಸರಕಾರ ಹೊರಟಿದೆ ಎಂದು ಜೆಡಿಎಸ್ ವಕ್ತಾರ ವೈ ಎಸ್ ವಿ ದತ್ತಾ ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾನೂನು ಉಲ್ಲಂಘಿಸಿ ದತ್ತು ಪಾದುಕೆಯನ್ನು ಸಾರ್ವಜನಿಕ ದರುಶನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಏಕೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 1975ರಲ್ಲಿ ನ್ಯಾಯಾಲಯ ನೀಡಿದ ಆದೇಶದಂತೆ ದತ್ತು ಪಾದುಕೆಯನ್ನು ಸಾರ್ವಜನಿಕವಾಗಿ ಯಾವ ಕಾರಣಕ್ಕೂ ಹೊರಗೆ ತರಕೂಡದು ಎಂದು ಸ್ಪಷ್ಟವಾಗಿ ಹೇಳಿದೆ. ಆದರೂ ಕೂಡಾ ಜಿಲ್ಲಾಡಳಿತದ ಮೇಲೆ ಪ್ರಭಾವ ಬೀರಿ ಪಾದುಕೆಯನ್ನು ಸಾರ್ವಜನಿಕ ದರುಶನಕ್ಕೆ ಇಡಲಾಗಿದೆ ಎಂದು ಆರೋಪಿಸಿದರು.

ಈ ಮೂಲಕ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ ನ್ಯಾಯಾಲಯದ ಆದೇಶವನ್ನು ಗಾಳಿಗೆ ತೂರಿ ಕಾನೂನು ಉಲ್ಲಂಘಿಸಿದೆ. ಸರಕಾರದ ಕ್ರಮದ ವಿರುದ್ದ ಹೈಕೋರ್ಟ್ ನಲ್ಲಿ ದಾವೆ ಹೂಡಲಾಗುವುದು ಎಂದು ದತ್ತ ಹೇಳಿದರು. ಸರಕಾರದ ಕ್ರಮ ಖಂಡಿಸಿ ಡಿಸೆಂಬರ್ 8 ರಂದು ಜೆಡಿಎಸ್ ವತಿಯಿಂದ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+