ಕೆಎಂಎಫ್ ಹಾಲಿನ ದರ ತುಟ್ಟಿ ಸಾಧ್ಯತೆ ?
ಬೆಂಗಳೂರು,
ನ. 25 : ಅಗತ್ಯ ವಸ್ತುಗಳ ಬೆಲೆ ಏರಿಕೆ ಗಗನಮುಖಿಯಾಗಿವೆ. ವಿದ್ಯುತ್ ದರ ಏರಿಸಲು ಸರಕಾರ ತೀರ್ಮಾನಿಸಿದೆ. ಇದರ ಬೆನ್ನಲ್ಲೇ ನಂದಿನಿ ಹಾಲಿನ ದರ ಹೆಚ್ಚಿಸಲು ಚಿಂತನೆ ನಡೆಸಲಾಗಿದೆ. ದರ ಏರಿಸಬೇಕೆಂಬ ಜಿಲ್ಲಾ ಹಾಲು ಒಕ್ಕೂಟಗಳ ಬೇಡಿಕೆ ಹಿನ್ನೆಲೆಯಲ್ಲಿ ಹಾಲಿನ ದರ ಹೆಚ್ಚಳದ ಪ್ರಸ್ತಾವವನ್ನು ಸರಕಾರದ ಮುಂದಿಡಲು ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್) ನಿರ್ಧರಿಸಿದೆ. id="toptextpromo">ದರ
ಏರಿಕೆ ವಿಚಾರವಾಗಿ ರಾಜ್ಯದ 13 ಹಾಲು ಒಕ್ಕೂಟಗಳು ಒಂದೊಂದು ರೀತಿಯ ಪ್ರಸ್ತಾವನೆ ಸಲ್ಲಿಸಿವೆ. ಈ ಸಂಬಂಧ ಇದೇ ತಿಂಗಳ 30 ರಂದು ಕೆಎಂಎಫ್ ಆಡಳಿತ ಮಂಡಳಿಯಲ್ಲಿ ಚರ್ಚಿ ನಡೆಯಲಿದೆ. ಸಭೆಯಲ್ಲಿ ಹಾಲು ಒಕ್ಕೂಟಗಳ ಅಧ್ಯಕ್ಷರೂ ಪಾಲ್ಗೊಳ್ಳಲಿದ್ದಾರೆ. ಬೆಲೆ ಹೆಚ್ಚಿಸಬೇಕೆ, ಬೇಡವೇ, ಹೆಚ್ಚಿಸಿದರೆ ಎಷ್ಟು ಹೆಚ್ಚಿಸಬೇಕು ಎಂದು ಕುರಿತು ತೀರ್ಮಾನಕ್ಕೆ ಬರುವ ಸಾಧ್ಯತೆಗಳಿವೆ. ನಂತರ ಸರಕಾರದ ಅನುಮತಿಗೆ ಅದನ್ನು ಕಳುಹಿಸಿಕೊಡಲಾಗುವುದು. ಸರಕಾರ ಸಮ್ಮತಿಸಿದರೆ ಜನವರಿ 1 ರಿಂದ ಬೆಲೆ ಏರಿಕೆಯಾಗುವ ನಿರೀಕ್ಷೆಯಿದೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications