ಕುಮಾರನ್ ಪಬ್ಲಿಕ್ ಶಾಲೆಗೆ ಟೆಕ್ಸಾಸ್ ಪ್ರಶಸ್ತಿ

ದೆಹಲಿ, ಪುಣೆ, ಚೆನ್ನೈ ಮತ್ತು ಕೋಲ್ಕತ್ತಾ ವಿದ್ಯಾರ್ಥಿಗಳ ಪ್ರಬಲ ಸ್ಪರ್ಧೆಯ ನಡುವೆಯೂ ಅತಿಹಿತ್ ಕೆ ಮತ್ತು ಸುಭಂ ನಂದಿ ತಂಡ ಗೆಲುವಿನ ನಗೆ ಬೀರಿದೆ. ಟೆಕ್ಸಾಸ್ ಇನ್ಟ್ರುಮೆಂಟ್ಸ್ ಇಂಡಿಯಾ ಕಾರ್ಯ ನಿರ್ವಾಹಕ ನಿರ್ದೇಶಕ ಡಾ.ಬಿಸ್ ವಾಡಿ ವಿಜೇತರಿಗೆ ಪಾರಿತೋಷಕವನ್ನು ನೀಡಿ ಗೌರವಿಸಿದರು.
ಚೆನ್ನೈನ ಪದ್ಮಾ ಶೇಷಾದ್ರಿಬಾಲ ಭವನ ಸೀನಿಯರ್ ಸೆಕೆಂಡರಿ ಶಾಲೆ ಮತ್ತ್ತು ಘಾಜಿಯಾಬಾದ್ ನ ದೆಹಲಿ ಪಬ್ಲಿಕ್ ಸ್ಕೂಲ್ ಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದವು. ವಿಜೇತರಾದ ಅತಿಹಿತ್ ಮತ್ತು ಸುಭಂ ನಂದಿಗೆ ಪಾರಿತೋಷಕದ ಜೊತೆಗೆ ಬಹುಮಾನವಾಗಿ ಸೋನಿ ಸಂಸ್ಥೆಯ ಲ್ಯಾಪ್ ಟಾಪ್ ಗಳನ್ನು ನೀಡಲಾಯಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications