ಚಾಮರಾಜನಗರದಲ್ಲಿ ವಿಜ್ಞಾನ ವಸ್ತುಪ್ರದರ್ಶನ
ಚಾಮರಾಜನಗರ,
ನ.19:ಚಾಮರಾಜನಗರ ಜಿಲ್ಲಾ ಮಟ್ಟದ 2009-10ನೇ ಸಾಲಿನ 'ಪ್ರೌಢಶಾಲಾ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ವಿಜ್ಞಾನ ವಸ್ತುಪ್ರದರ್ಶನವನ್ನು' ನವೆಂಬರ್ 23ರಂದು ಬೆಳಿಗ್ಗೆ 10ಗಂಟೆಗೆ ನಗರದ ರಾಮಸಮುದ್ರದ ಸಿ.ಆರ್.ಬಾಲರ ಪಟ್ಟಣ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದೆ. id="toptextpromo">ವಿಜ್ಞಾನ
ವಸ್ತುಪ್ರದರ್ಶನದಲ್ಲಿ ಜಿಲ್ಲೆಯ ಪ್ರತಿ ಪ್ರೌಢಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ಹಾಗೂ ಒಬ್ಬರು ವಿಜ್ಞಾನ ಶಿಕ್ಷಕರು ವಿಜ್ಞಾನ,ತಂತ್ರಜ್ಞಾನ ಮತ್ತು ಸಮಾಜ ಇದರ ಉಪವಿಭಾಗದಲ್ಲಿ ಹಸಿರು ಶಕ್ತಿ, ಹವಾಮಾನ ಬದಲಾವಣೆ ಕಾರಣಗಳು ಮತ್ತು ಪರಿಣಾಮಗಳು, ಮಾನವನ ಕಲ್ಯಾಣದಲ್ಲಿ ಜೀವಶಾಸ್ತ್ರ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಗಣಿತ ಮತ್ತು ದೈನಂದಿನ ಜೀವನ, ಕ್ರೀಡೆ ಮತ್ತು ಆಟಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳನ್ನು ಕುರಿತಂತೆ ಒಂದು ಮಾದರಿಯೊಂದಿಗೆ ಭಾಗವಹಿಸಬಹುದಾಗಿದೆ ಎಂದು ಚಾಮರಾಜನಗರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ದಟ್ಸ್
ಕನ್ನಡ ವಾರ್ತೆ)











Click it and Unblock the Notifications