ಬಜ್ಪೆ ವಿಮಾನನಿಲ್ದಾಣ ಮೇಲ್ದರ್ಜೆಗೆ

ವಿಮಾನ ನಿಲ್ದಾಣ ನಿರ್ದೇಶಕರ ಸ್ಥಾನವನ್ನು ಜನರಲ್ ಮ್ಯಾನೇಜರ್ ಕ್ಯಾಡರ್ ಗೆ ಏರಿಸಲಾಗಿದೆ. ಇದರೊ೦ದಿಗೆ ಈ ವಿಮಾನ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಮೇಲ್ದರ್ಜೆ ಪಡೆದಂತಾಗಿದ್ದು ಕಲ್ಲಿಕೋಟೆ, ಕೊಯಮುತ್ತೂರು, ಪುಣೆ, ಅಹಮದಾಬಾದ್, ಲಕ್ನೋ ಮತ್ತು ಗೋವಾ ಸಾಲಿಗೆ ಬಜ್ಪೆ ವಿಮಾನ ನಿಲ್ದಾಣ ಕೂಡ ಸೇರ್ಪಡೆಗೊಂಡಿದೆ.
ಸದ್ಯ ಬಜ್ಪೆ ವಿಮಾನ ನಿಲ್ದಾಣದಲ್ಲಿ 18 ವಿಮಾನಗಳು ಹಾರಾಟ ನಡೆಸುತ್ತಿದೆ. ಕಳೆದ ಆರ್ಥಿಕ ಸಾಲಿನಲ್ಲಿ ಆರು ಕೋಟಿ ರೂಪಾಯಿ ಲಾಭ ಗಳಿಸಿದ್ದು, ಪ್ರತಿದಿನ 150 ಪ್ರಯಾಣಿಕರ ಆಗಮನ ಹಾಗೂ ನಿರ್ಗಮನ ಸೌಲಭ್ಯವಿದೆ. ಕೊಲ್ಲಿ ರಾಷ್ಟ್ರಗಳಿಗೆ ನೇರ ವಿಮಾನ ಸೇರಿದಂತೆ ಹಜ್ ಪ್ರವಾಸಕ್ಕೂ ಈ ನಿಲ್ದಾಣದಿಂದ ನೇರ ಯಾನ ಸೌಕರ್ಯ ಏರ್ಪಡಿಸಲಾಗಿದೆ.
(ಏಜೆನ್ಸೀಸ್)












Click it and Unblock the Notifications