ಗೂಗಲ್ ರೇಖಾಚಿತ್ರ ಸ್ಪರ್ಧೆ ಗೆದ್ದ ಪುರು

Google doodle winner Puru Singh
ನವದೆಹಲಿ, ನ. 13: ಭಾರತದ ಶಾಲಾ ಮಕ್ಕಳಿಗೆ ಸೃಜನಶೀಲತೆಯನ್ನು ಓರೆಗೆ ಹಚ್ಚಲು ಗೂಗಲ್ ಸಂಸ್ಥೆ ಆಯೋಜಿಸಿದ್ದ ರೇಖಾಚಿತ್ರ ಸ್ಪರ್ಧೆಯಲ್ಲಿ ಗುರ್ ಗಾಂವ್ ನ ನಾಲ್ಕನೇ ಇಯತ್ತೆಯ ವಿದ್ಯಾರ್ಥಿ ಗೆಲುವು ಸಾಧಿಸಿದ್ದಾನೆ. ಪುರು ಪ್ರತಾಪ್ ಸಿಂಗ್ ಎಂಬ ಪೋರ ಸುಮಾರು 4,000ಕ್ಕೂ ಅಧಿಕ ಸ್ಪರ್ಧಿಗಳನ್ನು ಹಿಂದಿಕ್ಕಿದ್ದಾನೆ.

ಗೂಗಲ್ ಡ್ಲೂಡ್ ಕ್ರಿಯಟೀವ್ ಲೋಗೂ ವಿಶೇಷ ದಿನಗಳಂದು ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ಲಾಂಛನದ ಜಾಗದಲ್ಲಿ ಕಾಣಿಸಲಿದೆ. ಈ ಬಾರಿಯ ವಿಶೇಷವೆಂದರೆ ಆದಷ್ಟು ಸ್ಥಳೀಯ ವಿಶೇಷ ದಿನಾಚರಣೆಗಳಿಗೆ ಮಹತ್ವ ನೀಡಲಾಗಿದೆ. ಮಹಾತ್ಮ ಗಾಂಧಿ ಜಯಂತಿ, ಮಕ್ಕಳ ದಿನಾಚರಣೆ ಸೇರಿದಂತೆ ಎಲ್ಲಾ ವಿಶೇಷ ಸಂದರ್ಭಗಳಲ್ಲಿ ಗೂಗಲ್ ಲಾಂಛನ ಬದಲಾಗಲಿದೆ.

ಭಾರತ ದೇಶವು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಹಲವು ಧರ್ಮಗಳು, ಹಲವು ಸಂಸ್ಕೃತಿಗಳ ಸಂಗಮವಾಗಿದೆ. ವೈಜ್ಞಾನಿಕವಾಗಿ ಕೂಡ ಮುಂದುವರೆದಿದ್ದು, ಚಂದ್ರನಲ್ಲಿ ಜಲ ಕಂಡು ಹಿಡಿದಿರುವುದೇ ಸಾಕ್ಷಿ ಈ ಎಲ್ಲಾ ವೈವಿಧ್ಯತೆಯೇ ನನಗೆ ಡ್ಲೂಡ್ ರಚಿಸಲು ಸಹಾಯಕವಾಯಿತು ಎಂದು ಪ್ರಶಸ್ತಿ ಗೆದ್ದ ಪ್ರತಾಪ್ ಸಿಂಗ್ ಹೇಳಿದ್ದಾನೆ. ಅಹಮದಾಬಾದಿನ ರಾಷ್ಟ್ರೀಯ ವಿನ್ಯಾಸಕಾರ ಸಂಸ್ಥೆ ಅಂತಿಮ ಹಂತದ ರೇಖಾಚಿತ್ರಗಳನ್ನು ಗೂಗಲ್ ಗೆ ಆಯ್ದು ಕೊಟ್ಟಿದೆ. ಪ್ರತಾಪ್ ಸಿಂಗ್ ಅವರ ಡ್ಲೂಡ್ ಅನ್ನು ಗೂಗಲ್ ನ ಹಿರಿಯ ರೇಖಾಚಿತ್ರವಿನ್ಯಾಸಕಾರ ಡೆನ್ನಿಸ್ ಹ್ವಾಂಗ್ ಕೂಡ ಮೆಚ್ಚಿದ್ದಾರೆ.

ಒಂದನೆ ತರಗತಿಯಿಂದ 10 ನೇ ತರಗತಿವರೆಗಿನ ಎಲ್ಲಾ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದಾಗಿತ್ತ್ತು.. ಮೈ ಇಂಡಿಯಾ ಎಂಬ ವಿಷಯವಾಗಿ ಭಾರತದ ಸಂಗೀತ, ಸಂಸ್ಕೃತಿ, ಕಟ್ಟಡ, ಕ್ರೀಡೆ, ವೈಜ್ಞಾನಿಕ ಸಾಧನೆ..ಇತ್ಯಾದಿ ವಿಷಯಗಳನ್ನು ರೇಖಾಚಿತ್ರ(doodle)ಗಳ ಮೂಲಕ ಪ್ರತಿಬಿಂಬಿಸುವ ಸವಾಲನ್ನು ಮಕ್ಕಳಿಗೆ ನೀಡಲಾಗಿತ್ತು. ಅಂತಿಮ ವಿಜೇತರಿಗೆ ಒಂದು ಲ್ಯಾಪ್ ಟಾಪ್ ಹಾಗೂ ಆತ/ಆಕೆ ಓದುವ ಶಾಲೆಗೆ ತಂತ್ರಜ್ಞಾನ ವಿನಿಮಯ ಸಾಧ್ಯತೆಯನ್ನು ಕಲ್ಪಿಸಲಾಗುವುದು ಎಂದು ಗೂಗಲ್ ಸಂಸ್ಥೆ ಹೇಳಿದೆ.

(ದಟ್ಸ್ ಕನ್ನಡವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+