• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸ್ಟಾಂಪ್ ಪೇಪರ್ ಖರೀದಿ ಈಗ ಸುಲಭ

|
Stamp Paper
ಬೆಂಗಳೂರು, ನ. 12 : ಸ್ಟಾಂಪ್ ಪೇಪರ್ ಗಾಗಿ ಗಂಟೆಗಟ್ಟಳೆ, ದಿನಗಟ್ಟಲೆ ಬ್ಯಾಂಕ್ ಗಳ ಮುಂದೆ ಸಾಲುಗಟ್ಟಿ ನಿಂತು ಸುಸ್ತಾಗಿ ಸಾಕಪ್ಪ ಸಾಕು ಈ ಸ್ಟಾಂಪ್ ಪೇಪರ್ ಎಂದು ಜನರ ನಿತ್ಯ ಪರಿತಪಿಸುವುದನ್ನು ತಪ್ಪಿಸಲು ರಾಜ್ಯ ಸರಕಾರ ಮುಂದಾಗಿದೆ. ಖಾಸಗಿ ಕಂಪನಿ ಸಹಭಾಗಿತ್ವದಲ್ಲಿ ನಗರದ ಸುಮಾರು 16 ಕಡೆ ಸೇರಿದಂತೆ ರಾಜ್ಯಾದ್ಯಂತ 25 ಕೇಂದ್ರಗಳಲ್ಲಿ ಸ್ಟಾಂಪ್ ಪೇಪರ್ ದೊರೆಯುವ ಉನ್ನತ ಗುಣಮಟ್ಟದ ಮಷೀನ್ ವ್ಯವಸ್ಥೆಯನ್ನು ಸರಕಾರ ಆರಂಭಿಸಿರುವುದು ಸಂತಸದ ಸಂಗತಿ.

ಭಾರತೀಯ ನೋಂದಣಿ ಮತ್ತು ಮುದ್ರಾಂಕ ಸಚಿವಾಲಯದ ಅನುಮತಿ ಮೇರೆಗೆ ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ನವದೆಹಲಿ ಮೂಲದ ಪಿಟ್ನಿ ಬೊವ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಹಭಾಗಿತ್ವದಲ್ಲಿ ಉನ್ನತ ತಂತ್ರಜ್ಞಾನದ (hi-tech electronic franking machines) ಸ್ಟಾಂಪ್ ಪೇಪರ್ ಮಷೀನ್ ಗಳನ್ನು ಅಳವಡಿಸಲು ತೀರ್ಮಾನಿಸಿದೆ. ಉನ್ನತ ಗುಣಮಟ್ಟದ ಮಷೀನ್ ನಿಂದ ತಯಾರಿಸಲಾದ ಸ್ಟಾಂಪ್ ಪೇಪರ್ ಗಳು ಗಳನ್ನು ಯಾವ ಕಾರಣಕ್ಕೂ ನಕಲು ಮಾಡಲು ಸಾಧ್ಯವಿಲ್ಲ. ಜೊತೆಗೆ ನಿಗದಿತ ಸ್ಟಾಂಪ್ ಪೇಪರ್ ನ ಬೆಲೆ ಹಾಗೂ ಸೇವಾ ಶುಲ್ಕ ಮಾತ್ರ ಪಡೆದುಕೊಳ್ಳಲಾಗುತ್ತದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ತಿಳಿಸಿದೆ.

Official sources says that, high-end, highly versatile tamper-proof B-700 franking machines embedded with non-predictable secured encryption code, produce thermal wax transfer indelible impression on stamp duty certificate. These machines, hardly take a minute to making the impressions on the white-paper and can service as many as 20 at a time.

ಸೋಮವಾರದಿಂದ ರಾಜ್ಯ 25 ಕೇಂದ್ರಗಳಲ್ಲಿ ಈ ಸೇವೆ ಆರಂಭವಾಗಿದ್ದು, ಮೈಸೂರು(2443051) , ಮಂಗಳೂರು (2220567), ಹುಬ್ಬಳ್ಳಿ(2302526), ಧಾರವಾಡ(2441709), ಬೆಳಗಾವಿ(2425860), ದಾವಣಗೆರೆ(237151), ಶಿವಮೂಗ್ಗ(249603), ಬಳ್ಳಾರಿ(271388 ಮತ್ತು ಗುಲ್ಬರ್ಗಾ(256400) ಜನತೆ ಸ್ಟಾಂಪ್ ಪೇಪರ್ ಸೇವೆಯನ್ನು ಪಡೆದುಕೊಳ್ಳಬಹುದು. ಬೆಂಗಳೂರಿನ 16 ಕೇಂದ್ರಗಳಲ್ಲಿ ಈ ಸೌಲಭ್ಯ ಕಲ್ಪಿಸಲಾಗಿದೆ. 20, 50, 100, 200 ಹಾಗೂ 500 ರುಪಾಯಿಗಳ ಸ್ಟಾಂಪ್ ಪೇಪರ್ ದೊರೆಯಲಿವೆ.

ಬೆಂಗಳೂರಿನಲ್ಲಿ ಸ್ಟಾಂಪ್ ಪೇಪರ್ ಗಳು ದೊರೆಯುವ ಸ್ಥಳ ಮತ್ತು ದೂರವಾಣಿ ನಂಬರ್ ಗಳು

ಬಾಣಸವಾಡಿ (080- 2295 9335), ಬನಶಂಕರಿ (2295 9331), ಬೊಮ್ಮನಹಳ್ಳಿ (2563 4517), ಗಾಂಧಿನಗರ (2295 9353), ಹೆಬ್ಬಾಳ (2295 9322), ಜಯನಗರ (2295 9347), ಕೆ ಆರ್ ಪುರಂ (25614548), ಕೆಂಗೇರಿ (2848 4159), ಮಲ್ಲೇಶ್ವರಂ (2295 9357), ನಾಗರಭಾವಿ (2321 5215), ಪೀಣ್ಯ (28366091), ರಾಜಾಜಿನಗರ (23158206), ಶಿವಾಜಿನಗರ (2295 9340), ವರ್ತೂರು (2853 9198), ಯಲಹಂಕ (2295 9361), ಯಶವಂತಪುರ (2295 9366)

(ದಟ್ಸ್ ಕನ್ನಡ ವಾರ್ತೆ)

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more