ಮೋದಿ ಶೀಘ್ರ ಚೇತರಿಕೆಗೆ ಮುಸ್ಲಿಂರ ಪ್ರಾರ್ಥನೆ

Muslims offer prayers for Modi's recovery
ವಡೋದರ, ಅ.31: ಎಚ್1ಎನ್1 ಕಾಯಿಲೆಯಿಂದ ಬಳಲುತ್ತಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಶೀಘ್ರ ಗುಣಮುಖರಾಗಲಿ ಎಂದು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಮರು ಶನಿವಾರ ಪ್ರಾರ್ಥನೆ ಸಲ್ಲಿಸಿದರು. ಗುಜರಾತ್ ನ ಕೇಂದ್ರ ಭಾಗದಲ್ಲಿನ ಮುಸ್ಲಿಂ ನಾಯಕರು ಮೋದಿ ಶೀಘ್ರ ಚೇತರಿಸಿಕೊಳ್ಳಲಿ ಎಂದು ದರ್ಗಾಗಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಗುಜರಾತ್ ಅಲ್ಪಸಂಖ್ಯಾತ ಮಂಡಳಿಯ ಅಬ್ದುಲ್ ಗನಿ ಖುರೇಶಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಮೋದಿ ಅವರಿಗೆ ಎಚ್1ಎನ್1 ಸೋಂಕು ಇರುವುದು ದೃಢಪಟ್ಟ ಕೂಡಲೆ ಅವರು ಬೇಗ ಗುಣಮುಖರಾಗಲಿ ಎಂದು ಮುಸ್ಲಿಂ ಬಾಂಧವರು ದರ್ಗಾಗಳಲ್ಲಿ ಪ್ರಾರ್ಥನೆಗಳಲ್ಲಿ ನಿರತರಾದರು ಎಂದು ಹೇಳಿದರು.

ಇದೇ ಸಮಯದಲ್ಲಿ ಬರೋಡ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೋದಿ ಅವರು ಚೇತರಿಸಿಕೊಳ್ಳಲಿ ಎಂದು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಗುಜರಾತ್ ನ ಕೇಂದ್ರ ಭಾಗದಲ್ಲಿ 'ಮೃತ್ಯುಂಜಯ ಜಪ' ಮತ್ತು ಯಜ್ಞಗಳನ್ನು ಮಾಡಿರುವುದಾಗಿ ವರದಿಯಾಗಿದೆ.

(ಏಜೆನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+