ಆರ್ಥಿಕ ಕುಸಿತದಿಂದ ಮೇಲೆದ್ದ ಅಮೆರಿಕ

ಈ ವರ್ಷಾವಧಿಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಬೆಳವಣಿಗೆ ದಾಖಲಾಗಿದೆ. ಈಗ ದೇಶದ ಜಿಡಿಪಿಯು ಶೇ. 3.5ರಷ್ಟು ವೃದ್ಧಿಯಾಗಿದೆ ಎಂದು ಆರ್ಥಿಕ ವಿಶ್ಲೇಷಣೆ ಮಂಡಳಿ(ಬಿಇಎ) ಅಂದಾಜು ಮಾಡಿದೆ. ಜಿಡಿಪಿಯಲ್ಲಿ ಎರಡು ಮೂರಾಂಶದಷ್ಟು ಪಾಲು ಹೊಂದಿರುವ ಗ್ರಾಹಕರ ವೆಚ್ಚವು ಈ ಅವಧಿಯಲ್ಲಿ ಶೇ. 3.4 ರಷ್ಟು ಏರಿಕೆ ದಾಖಲಿಸಿದೆ. ಇದಕ್ಕೂ ಮುನ್ನ ಹಿಂದಿನ ತ್ರೈಮಾಸಿಕದಲ್ಲಿ ಇದು ಶೇ.0.9ರಷ್ಟು ಕುಸಿತ ದಾಖಲಿಸಿತ್ತು.
ದ್ವಿತೀಯ ತ್ರೈಮಾಸಿಕ ಅವಧಿಯಲ್ಲಿ ಅರ್ಥ ವ್ಯವಸ್ಥೆ ಶೇ. 0.7ರಷ್ಟು ಕಂಡಿತ್ತು. ವಿನಾಶದ ಅಂಚಿಗೆ ಸರಿಯುತ್ತಿದ್ದ ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರಲು ಅಮೆರಿಕ ಸರಕಾರವು ಭಾರ ಪ್ರಮಾಣದ ಹಣಕಾಸು ನೆರವು ಘೋಷಿಸಿತ್ತು. 2008ರ ಸೆಪ್ಟೆಂಬರ್ ನಲ್ಲಿ ಅಮೆರಿಕವು ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಗುರಿಯಾಗಿತ್ತು. 1930ರ ನಂತರ ಇಂತಹ ವಿಷಮ ಪರಿಸ್ಥಿತಿ ಉದ್ಭವಿಸಿತ್ತು. ಈ ಬಿಕ್ಕಟ್ಟು ವಿಶ್ವದಾತ್ಯಂತ ತಲ್ಲಣ ಮೂಡಿಸಿತ್ತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications