ಅ.26ರಿಂದ ಪೆಟ್ರೋಲ್, ಡೀಸೆಲ್ ತುಸು ತುಟ್ಟಿ
ನವದೆಹಲಿ,
ಅ.24: ಸರಕಾರ ಡೀಲರ್ ಗಳಿಗೆ ಕಮಿಷನ್ ದರವನ್ನು ಹೆಚ್ಚಿಸಿರುವುದರಿಂದ ಸೋಮವಾರದಿಂದ (ಅ.26) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಕೊಂಚ ಹೆಚ್ಚಳವಾಗಲಿದೆ. ಹೆಚ್ಚಳವನ್ನು ದೇಶಾದ್ಯಂತ ಗ್ರಾಹಕರ ಮೇಲೆ ವರ್ಗಾಯಿಸಲಾಗುತ್ತದೆ. id="toptextpromo">ಸರಕಾರ
ಡೀಲರ್ ಗಳ ಕಮಿಷನ್ ದರವನ್ನು ಪ್ರತಿ ಕಿಲೋ ಲೀಟರ್(1000 ಲೀಟರ್)ಗೆ ರು.1028 ರಿಂದ ರು.1,098ಗಳಿಗೆ ಹಾಗೂ ಡೀಸೆಲ್ ಗೆ ಕಿಲೋಲೀಟರ್ ಗೆ ರು.630ರಿಂದ ರು.670 ಕ್ಕೆ ಹೆಚ್ಚಿಸಿದೆ. ಇದರ ಪರಿಣಾಮ ಪೆಟ್ರೋಲ್ ಬೆಲೆ ಲೀಟರ್ ಗೆ 7ಪೈಸೆ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 4 ಪೈಸೆಯಷ್ಟು ಹೆಚ್ಚಾಗಲಿದೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications