ಅಂಚೆ ಇಲಾಖೆಗೆ ಅಕ್ಸೆಂಚರ್ ನಿಂದ ಕಾಯಕಲ್ಪ
ನವದೆಹಲಿ, ಅ. 14 : ಭಾರತೀಯ ಅಂಚೆ ಇಲಾಖೆಗೆ ಆಧುನೀಕರಣದ ಸ್ಪರ್ಷ ನೀಡಲು ಜಾಗತಿಕ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎಕ್ಸೆಂಚರ್ ಹೊಸ ಗುತ್ತಿಗೆಯನ್ನು ಪಡೆದುಕೊಂಡಿದೆ.
ಸ್ನೇಲ್ ಮೇಲ್ ಎಂದರೆ ಬಸವನಹುಳದ ಗತಿಯಲ್ಲಿ ಸೇವೆ ನೀಡುತ್ತಿರುವ ಭಾರತೀಯ ಅಂಚೆ ಇಲಾಖೆಗೆ ಇತರ ಖಾಸಗಿ ಅಂಚೆ ಸೇವೆಗಳೊಂದಿಗೆ ಸ್ಪರ್ಧೆಗೆ ನಿಲ್ಲುವುದು ಅನಿವಾರ್ಯವಾಗಿದೆ. ಈ ಆಧುನೀಕರಣದಿಂದ ದೇಶದ ಖಾಸಗಿ ಮತ್ತು ಅಂತಾರಾಷ್ಟ್ರೀಯ ಅಂಚೆ ಸೇವಾ ಸಂಸ್ಥೆಗಳೊಂದಿಗೆ ವೇಗ ಮತ್ತು ಗುಣಮಟ್ಟದಲ್ಲಿ ಸ್ಪರ್ಧೆಗೆ ಭಾರತೀಯ ಅಂಚೆ ಇಲಾಖೆ ನಿಲ್ಲಲಿದೆ ಎಂಬ ಆಶಯವನ್ನು ಎಕ್ಸೆಂಚರ್ ವ್ಯಕ್ತಪಡಿಸಿದೆ.
ಮುಖ್ಯವಾಗಿ ಅಂಚೆ ಸೇವೆ ಅಧುನೀಕರಣದ ಆದಾಯ ಕ್ರೂಢೀಕರಿಸಲು ಯೋಜನೆ ರೂಪಿಸಲಾಗಿದ್ದು, ಪ್ರಸ್ತುತ ಮಾರುಕಟ್ಟೆಯ ವೇಗದಲ್ಲಿ ಬಿಲ್ ಪಾವತಿ ಮಾಡುವುದು, ಇ-ಪೋಸ್ಟಿಂಗ್, ಜೀವ ವಿಮಾ ಸೇವೆ, ಹಣದ ವ್ಯವಹಾರ ಮತ್ತು ಬ್ಯಾಂಕಿಂಗ್ ಸೇವೆ ಹಾಗೂ ರಾಷ್ಟ್ರೀಯ ಅಂತಾರಾಷ್ಟ್ರೀಯ ಕೋರಿಯರ್ ಸೇವೆಯನ್ನು ಅಂಚೆ ಇಲಾಖೆ ನೀಡಲಾಗುವುದು ಅಕ್ಸೆಂಚರ್ ತಿಳಿಸಿದೆ.
(ಏಜನ್ಸೀಸ್)












Click it and Unblock the Notifications