ಗಾಲ್ಫ್ ಚಾಂಪಿಯನ್ ಆದ ಸಿ ಮುನಿಯಪ್ಪ

Golfer Muniyappa
ಗುರ್‌ಗಾಂವ್, ಅ. 12 : ಬೆಂಗಳೂರಿನ ಸಿ. ಮುನಿಯಪ್ಪ ಇಂಡಿಯನ್ ಓಪನ್ ಗಾಲ್ಫ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಅಂತಿಮ ಸುತ್ತಿನಲ್ಲಿ ತೀವ್ರ ಪೈಪೋಟಿ ಎದುರಿಸಿದ ಮುನಿಯಪ್ಪ ಕೊನೆಯ ಹಂತದವರೆಗೂ ಮುನ್ನಡೆ ಕಾಯ್ದುಕೊಳ್ಳಲು ಯಶಸ್ವಿಯಾಗುವ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಪ್ರಶಸ್ತಿ ಜತೆಗೆ 1.25 ಲಕ್ಷ ಡಾಲರ್ ಬಹುಮಾನ ಮೊತ್ತವನ್ನು ಮುನಿಯಪ್ಪ ಜೇಬಿಗಿಳಿಸಿಕೊಂಡರು. ಇದರೊಂದಿಗೆ ಏಷ್ಯನ್ ಟೂರ್ ಪ್ರಶಸ್ತಿ ಗೆಲ್ಲುವ ಸಾಮರ್ಥ್ಯದ ಮತ್ತೊಬ್ಬ ಭಾರತೀಯ ಗಾಲ್ಫ್ ಪಟು ಬೆಳಕಿಗೆ ಬಂದಂತಾಗಿದೆ. ಟೂರ್ನಿಯ ಎರಡನೇ ಸುತ್ತಿನಲ್ಲಿ ಅಗ್ರಸ್ಥಾನಕ್ಕೇರಿದ್ದ ಮುನಿಯಪ್ಪ ಕೊನೆಯ ಹಂತದವರೆಗೂ ತಮ್ಮ ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾದರು.

ಒಂದು ಹಂತದಲ್ಲಿ ಮುನಿಯಪ್ಪ ಹಾಗೂ ಕೋರಿಯಾದ ಲೀ ಸಂಗ್ 276 ಅಂಕ ಗಳಿಸುವ ಮೂಲಕ ಸಮಬಲ ಹೊಂದಿದ್ದರು. ಆದರೆ ಅಂತಿಮ ಸುತ್ತಿನಲ್ಲಿ 70 ಆಂಕ ಕಲೆ ಹಾಕಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಮುನಿಯಪ್ಪ, ಏಷ್ಯನ್ ಟೂರ್ ಪ್ರಶಸ್ತಿ ಗೆಲ್ಲುವ ಬಹುದಿನಗಳ ಕನಸು ನನಸಾಯಿತು ಎಂದು ಹೇಳಿದ್ದಾರೆ.

ಟೂರ್ನಿಯಲ್ಲಿ ಆಡುವ ಏಕಮಾತ್ರ ಉದ್ದೇಶದಿಂದ ಕಣಕ್ಕಿಳಿದಿದ್ದೆ. ಪ್ರಶಸ್ತಿ ಗೆಲ್ಲುವ ಯಾವುದೇ ವಿಶ್ವಾಸ ಇರಲಿಲ್ಲ. ಆದರೆ ಪ್ಲೇ ಆಫ್ ಗುಂಪು ಪ್ರವೇಶಿಸಿದ ಮೇಲೆ ಪ್ರಶಸ್ತಿಗೆ ಯಾಕೆ ಪ್ರಯತ್ನಿಸಬಾರದು ಎಂದು ಶ್ರಮ ಹಾಕಿದೆ ಎಂದು ಹೇಳಿದ್ದಾರೆ. ಕ್ಲಬ್ ಸದಸ್ಯರ ಆಟವನ್ನು ನೋಡಿ ಆಟವನ್ನು ಕಲಿತೆ. ನಾನು ಇದುವರೆಗೂ ಯಾವುದೇ ಕೋಚ್ ನೆರವು ಪಡೆದಿಲ್ಲ ಎಂದು ತಿಳಿಸಿದ ಮುನಿಯಪ್ಪ, ಬಹುಮಾನ ಮೊತ್ತವನ್ನು ಹೇಗೆ ಖರ್ಚು ಮಾಡಬೇಕೆಂಬುದೇ
ಗೊತ್ತಾಗುತ್ತಿಲ್ಲ. ಬಹುಶಃ ಬಾಡಿಗೆ ಮನೆಗೆ ಖರ್ಚಾಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+