ಚಂದ್ರನಲ್ಲಿರುವ ನೀರಿಗಾಗಿ ನಾಸಾ ಸಿಡಿಸಲಿದೆ ಬಾಂಬ್

ಈ ಶುಕ್ರವಾರ, ಅಂದರೆ ಅಕ್ಟೋಬರ್ 9ರಂದು ನಾಸಾ LCROSS ಕೃತಕ ಉಪಗ್ರಹವನ್ನು ಉಡಾಯಿಸಲಿದೆ. ಈ ಉಪಗ್ರಹ ಸಿಡಿಸುವ ಸೆಂಟಾರ್ ರಾಕೆಟ್, ಬುಲೆಟ್ ವೇಗಕ್ಕಿಂತ ದ್ವಿಗುಣ ವೇಗದಲ್ಲಿ ಸಾಗಿ ಚಂದ್ರನ ಮೇಲೆ ದೊಡ್ಡ ರಂಧ್ರವನ್ನು ಸೃಷ್ಟಿಸಲಿದೆ. ಚಂದ್ರನ ಗರ್ಭದಲ್ಲಿ ಹುದುಗಿದೆ ಎನ್ನಲಾದ ಐಸ್ ರೂಪದಲ್ಲಿರುವ ನೀರಿರುವ ಪ್ರದೇಶದಲ್ಲಿ ರಾಕೆಟ್ಟನ್ನು ಸಿಡಿಸಲಾಗುತ್ತಿದೆ.
ರಾಕೆಟ್ ಸಿಡಿತದಿಂದಾಗಿ ಚಂದ್ರನ ಮೇಲ್ಮೈಯಿಂದ ಏಳುವ ಧೂಳನ್ನು ದೂರದರ್ಶಕದ ಸಹಾಯದಿಂದ ಭೂಮಿಯ ಮೇಲಿಂದಲೇ ನೋಡಬಹುದು ಎನ್ನಲಾಗಿದೆ. NASA-TV ಉಪಗ್ರಹದ ಉಡಾವಣೆ ಮತ್ತು ರಾಕೆಟ್ ಸ್ಫೋಟದ ಚಿತ್ರಣವನ್ನು ಬಿತ್ತರಿಸಲಿದೆ.
ನಾಸಾದ ಈ ಮಿಷನ್ ನಿಂದಾಗಿ ವಿಜ್ಞಾನಿಗಳಿಗೆ ಚಂದ್ರದ ಹೆಚ್ಚಿನ ಅಧ್ಯಯನಕ್ಕೆ ಸಹಕಾರಿಯಾಗಲಿದೆ ಎಂದು ಕೆಲವರು ಅಭಿಪ್ರಾಯವಾದರೆ, ಚಂದ್ರನ ಮೇಲೆ ಬಲಪ್ರಯೋಗ ಮಾಡುವುದು ಹಿತಕರವಲ್ಲ ಎಂದು ಕೆಲ ಬ್ಲಾಗರುಗಳು ಕಳವಳ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications