2014ರ ಚುನಾವಣೆಗೆ ಅಡ್ವಾಣಿ ನಾಯಕತ್ವ ಇಲ್ಲ

ರಾಷ್ಟ್ರೀಯ ವಾಹಿನಿಯೊಂದಿಗೆ ಮಾತನಾಡಿದ ನಾಯ್ಡು, ಮುಂದಿನ ಲೋಕಸಭೆ ಚುನಾವಣೆಗೆ ಅಡ್ವಾಣಿ ಸ್ಪರ್ಧಿಸುವುದಿಲ್ಲ. ಹೀಗಾಗಿ ಅವರ ನಾಯಕತ್ವದಲ್ಲಿ ಲೋಕಸಭೆ ಚುನಾವಣೆ ಅಖಾಡಕ್ಕೆ ಇಳಿಯುವುದಿಲ್ಲ. 2014ರ ವೇಳೆಗೆ ಅವರಿಗೆ 87 ವರ್ಷಕ್ಕೆ ಕಾಲಿಡಲಿದ್ದಾರೆ ಎಂದರು. ಅಡ್ವಾಣಿ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋತ ನಂತರ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಪಡೆಯುವ ಇಚ್ಚೆ ವ್ಯಕ್ತಪಡಿಸಿದ್ದರು. ಆದರೆ, ನಮ್ಮೆಲ್ಲರ ಒತ್ತಾಯದ ಮೇರೆಗೆ ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಅವರಿಗೆ ಪಕ್ಷ ಯಾವುದೇ ಡೆಡ್ ಲೈನ್ ನೀಡಿಲ್ಲ. ಅವರಿಷ್ಟದಂತೆ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸುತ್ತೇವೆ ಎಂದ ನಾಯ್ಡು, ನಾಯಕತ್ವ ಬದಲಾವಣೆ ಅನಿವಾರ್ಯ. ಅದನ್ನು ಮುಂದಿನ ದಿನಗಳಲ್ಲಿ ಅಡ್ವಾಣಿ ಅವರೇ ತಿಳಿಸುತ್ತಾರೆ.
(ಏಜನ್ಸೀಸ್)












Click it and Unblock the Notifications