ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಂಕಟರಾಮನ್ ರಾಮಕೃಷ್ಣನ್ ಗೆ ಪ್ರತಿಷ್ಠಿತ ನೊಬೆಲ್

|
Google Oneindia Kannada News

Venkatraman Ramakrishnan
ಸ್ಟಾಕ್ ಹೋಮ್, ಅ. 7 : ರೈಬೋಸೋಮ್ಸ್ ವಿಷಯದಲ್ಲಿ ನಡೆಸಿದ ಸಂಶೋಧನೆ ಪರಿಗಣಿಸಿ ಅನಿವಾಸಿ ಭಾರತೀಯ ಪ್ರೊ. ವೆಂಕಟರಾಮನ್ ರಾಮಕೃಷ್ಣನ್ ಸೇರಿದಂತೆ ಮೂರು ವಿಜ್ಞಾನಿಗಳಿಗೆ 2009ರ ಸಾಲಿನ ರಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ರೈಬೋಸೋಮ್ ಗಳ ರಚನೆ ಮತ್ತು ಕಾರ್ಯಚಟುವಟಿಕೆ ವಿಷಯದ ಮೇಲೆ ನಡೆಸಿದ ಸಂಶೋಧನೆಗಾಗಿ ಭಾರತೀಯ ಮೂಲದ ಪ್ರೊ ವೆಂಕಟರಾಮನ್ ರಾಮಕೃಷ್ಣನ್, ಅಮೆರಿಕಾದ ಥಾಮಸ್ ಸ್ಟೀಜ್ ಮತ್ತು ಇಸ್ರೇಲಿನ ಅಡಾ ಯೂನತ್ ರಿಗೆ 2009ರ ಸಾಲಿನ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆತಿದೆ. ನೊಬೆಲ್ ಪ್ರಶಸ್ತಿಯನ್ನು ಈ ಮೂರು ಸಂಶೋಧಕರಿಗೆ ಸಮನಾಗಿ ಹಂಚಲಾಗುತ್ತಿದೆ.

1952ರಲ್ಲಿ ತಮಿಳುನಾಡಿನ ಚಿದಂಬರಂನಲ್ಲಿ ಜನಿಸಿದ ಪ್ರೊ. ವೆಂಕಟರಾಮನ್ ರಾಮಕೃಷ್ಣನ್ ಅವರು ಸದ್ಯ ಯುಕೆಯ ಕೇಂಬ್ರಿಡ್ಜನಲ್ಲಿನ MRC Laboratory of Molecular Biologyನಲ್ಲಿ ಸಂಶೋಧನೆಯಲ್ಲಿ ತೊಡಗಿದ್ದಾರೆ. 1971ರಲ್ಲಿ ಬರೋಡಾ ವಿಶ್ವವಿದ್ಯಾನಿಲಯದಿಂದ ಬಿಎಸ್ ಸಿ ಪದವಿ ಪಡೆದ ಅವರು 1976ರಲ್ಲಿ ಓಹಿಯೋ ವಿಶ್ವವಿದ್ಯಾನಿಲಯದಲ್ಲಿ ಭೌತಶಾಸ್ತ್ರದಲ್ಲಿ ಪಿಎಚ್ ಡಿ ಪದವಿ ಗಳಿಸಿದರು. ಪ್ರಸ್ತುತ ವೆಂಕಟರಾಮನ್ ಅವರು ಲಂಡನ್ನಿನ ಮೆಡಿಕಲ್ ರಿಸರ್ಚ್ ಕೌನ್ಸಿಲ್ ನ ಮಾಲಿಕ್ಯೂಲಾರ್ ಬಯಾಲಜಿ ಲಾಬೋರೇಟರೀಸ್ ನಲ್ಲಿ ಪ್ರೊಪೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X