ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣಿಧಣಿಗಳಿಂದ ಮನೆ ನಿರ್ಮಾಣಕ್ಕೆ ನಿರ್ಧಾರ : ರೆಡ್ಡಿ

|
Google Oneindia Kannada News

Janardhan Reddy
ಬಳ್ಳಾರಿ, ಅ. 7 : ಜಿಲ್ಲೆಯಲ್ಲಿ ಮಳೆಯಿಂದ ಸಂಪೂರ್ಣವಾಗಿ ಬಿದ್ದು ಹೋಗಿರುವ 11 ಸಾವಿರ ಮನೆಗಳನ್ನು ಜಿಲ್ಲೆಯ ಗಣಿ ಮಾಲೀಕರೆಲ್ಲ ಸೇರಿ ತಲಾ ಒಂದು ಲಕ್ಷ ವೆಚ್ಚದಲ್ಲಿ ನಿರ್ಮಿಸಿಕೊಡುವುದಾಗಿ ಪ್ರವಾಸೋದ್ಯಮ ಮತ್ತು ಮೂಲಭೂತ ಸೌಕರ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜ.ಜನಾರ್ಧನರೆಡ್ಡಿ ತಿಳಿಸಿದರು.

ಮಂಗಳವಾರ ಬೆಳಿಗ್ಗೆ ತಮ್ಮ ನಿವಾಸದಲ್ಲಿ ಸಂತ್ರಸ್ಥರ ಪರಿಹಾರಕ್ಕಾಗಿ ವೀರಶೈವ ವಿದ್ಯಾವರ್ಧಕ ಸಂಘದವರು ನೀಡಲಾದ 10 ಲಕ್ಷ ರೂ ದೇಣಿಗೆ ಚೆಕ್ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹಾನಿಗೊಳಗಾಗಿರುವ 2 ಲಕ್ಷ ಮನೆಗಳನ್ನು ನಿರ್ಮಿಸಬೇಕಾಗಿದೆ ಅದರಂತೆ ಜಿಲ್ಲೆಯಲ್ಲಿ ಈ ವರೆಗೆ ಪೂರ್ಣ ಮತ್ತು ಭಾಗಶಃ ಒಟ್ಟು 53752 ಮನೆಗಳು ಬಿದ್ದು ಹೋಗಿರುತ್ತವೆ. 30889 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದರು.

625 ಜಾನುವಾರುಗಳು, ಈವರೆಗೆ 19 ಜೀವ ಹಾನಿಯಾಗಿದೆ. 119.41 ಕೋಟಿ ರೂ ರಸ್ತೆ ಸೇತುವೆ ಇತ್ಯಾದಿ ಮೂಲಭೂತ ಸೌಕರ್ಯದ ನಷ್ಟವಾಗಿದ್ದು, ಒಟ್ಟಾರೆ 189.3 ಕೋಟಿ ರೂ ನಷ್ಟವಾಗಿದೆ ಎಂದು ತಿಳಿಸಿದರು. 10 ಲಕ್ಷ ರೂ ದೇಣಿಗೆ ನೀಡಿದ ವೀರಶೈವ ವಿದ್ಯಾವರ್ಧಕ ಸಂಘದ ಮಾನವೀಯ, ಔದಾರ್ಯ ತೆಯನ್ನು ಪ್ರಶಂಸಿದರು. ಈ ರೀತಿ ಅತಿವೃಷ್ಟಿ ಪಡಿತರ ನೆರವಿಗೆ ಎಲ್ಲರೂ ಸಾಧ್ಯವಾದ ರೀತಿಯಲ್ಲಿ ಸಹಾಯ ಹಸ್ತ ನೀಡಬೇಕೆಂದು ಕೋರಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X