ರಾಜ್ ಠಾಕ್ರೆ ಆಧುನಿಕ ಜಿನ್ನಾ : ಬಾಳಾ ಠಾಕ್ರೆ

ಮಹಾರಾಷ್ಟ್ರ ನವನಿರ್ಮಾಣ ಸೇನೆ ಮುಖ್ಯಸ್ಥ ರಾಜ್ ಠಾಕ್ರೆಯನ್ನು ಬಾಳಾ ಠಾಕ್ರೆ ಆಧುನಿಕ ಜಿನ್ನಾ ಎಂದು ಜರಿದಿದ್ದಾರೆ. ಬ್ರಿಟಿಷರಿಂದ ಪ್ರೇರಿತರಾದ ಜಿನ್ನಾ ಅಖಂಡ ಭಾರತವನ್ನು ಒಡೆದರು. ಈಗಿನ ಕಾಲದ ಜಿನ್ನಾ ರಾಜ್ ಠಾಕ್ರೆ, ಮರಾಠಿ ಜನರನ್ನು ಒಡೆಯುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಮರಾಠಿ ಮತಗಳನ್ನು ಒಡೆದು ಅಧಿಕಾರ ಗಿಟ್ಟಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ರಾಜ್ ಠಾಕ್ರೆಯನ್ನು ಹುರಿದುಂಬಿಸತೊಡಗಿದೆ. ಅವರ ರಾಜಕೀಯ ಮುಸ್ಲಿಂ ಲೀಗ್ ಗಿಂತ ಭಯಾನಕವಾದದ್ದು. ಧರ್ಮದ ಆಧಾರದ ಮೇಲೆ ಜಿನ್ನಾ ಮತ್ತು ಮುಸ್ಲಿಂ ಲೀಗ್ ಭಾರತವನ್ನು ಒಡೆದು ಪಾಕಿಸ್ತಾನ ಕೊಡಿ ಎಂಬ ಬೇಡಿಕೆ ಇಟ್ಟಿತ್ತು ಎಂದು ಬಾಳಾ ಠಾಕ್ರೆ ಕಿಡಿಕಾರಿದ್ದಾರೆ.
ಅಕ್ಟೋಬರ್ 13 ರಿಂದ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿವೆ. ಬಿಜೆಪಿ, ಶಿವಸೇನೆ ಪಕ್ಷಗಳು ಮೈತ್ರಿಮಾಡಿಕೊಂಡಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಗ್ಗುಬಡಿಯಬೇಕು ಎಂದು ತೀರ್ಮಾನಿಸಿ ಭಾರಿ ಪ್ರಚಾರ ಹಾಗೂ ವಿನೂತನ ತಂತ್ರಗಾರಿಕೆಯನ್ನು ನಡೆಸಿದೆ. ಆದರೆ, ಬಿಜೆಪಿ ಮತ್ತು ಶಿವಸೇನೆಗೆ ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ(ಎಂಎನ್ಎಸ್) ಸೇನೆ ಮಗ್ಗಲು ಮುಳ್ಳಾಗಿ ಪರಿಣಮಿಸಿದೆ. ಎಂಎನ್ಎಸ್ ಮರಾಠಿ ಮತಗಳನ್ನು ಕಸಿದುಕೊಂಡರೂ ಅದು ಬಿಜೆಪಿ ಮೈತ್ರಿ ಬಲವಾದ ಹೊಡೆತವೆ ಎಂದೆಣಿಸಲಾಗಿದೆ.
(ಏಜನ್ಸೀಸ್)












Click it and Unblock the Notifications