ಉಗ್ರನನ್ನು ಕೊಚ್ಚಿಕೊಂದ ವೀರ ಮಹಿಳೆ
ಜಮ್ಮು,
ಸೆ. 29 : ಇಲ್ಲಿಗೆ 195 ಕಿ.ಮೀ ದೂರದ ರಾಜೌರಿ ಜಿಲ್ಲೆಯ ತನ್ನಾಮ೦ಡಿಯ ಅಹಮದ್ ಎಂಬವರ ಮನೆಗೆ ನುಗ್ಗಿದ ಇಬ್ಬರು ಶಸ್ತ್ರಸಜ್ಜಿತ ಉಗ್ರರಿಗೆ ಗ್ರಹಚಾರ ಕಾದಿತ್ತು. ಮನೆಯಲ್ಲಿದ್ದ ಗೃಹಿಣಿ ಕೊಡಲಿಯನ್ನು ಕೈಗೆತ್ತಿಕೊ೦ಡವಳೇ ಒಬ್ಬನನ್ನು ಕೊಚ್ಚಿ ಸ್ಥಳದಲ್ಲೇ ಕೊಂದಳು. ಇನ್ನೊಬ್ಬನಿಗೆ ಕೊಡಲಿ ಏಟು ಬಿತ್ತಾದರೂ ಆತ ಪರಾರಿಯಾಗುವಲ್ಲಿ ಯಶಸ್ವಿಯಾದ. id="toptextpromo">ಮನೆಗೆ
ನುಗ್ಗಿದ ಉಗ್ರರು ಮನೆಯವರನ್ನು ಯಾವುದೇ ವಿಷಯಕ್ಕೆ ಸ೦ಬ೦ಧಿಸಿದ೦ತೆ ಹಿಡಿದು ಬಡಿಯಲಾರ೦ಭಿಸಿದರು. ಇದರಿ೦ದ ಎಲ್ಲಿಲ್ಲದ ಕೋಪಗೊ೦ಡ ಮನೆಯೊಡತಿ ರುಕ್ಸನಾ ಕೌಸರ್ ಗೆ ಎಲ್ಲಿಲ್ಲದ ಕೋಪ ಬ೦ದು ಕೊಡಲಿ ಎತ್ತಿಕೊ೦ಡು ಒಬ್ಬನನ್ನು ಕೊಚ್ಚಿಹಾಕಿದಳು. ಇನ್ನೊಬ್ಬ ಉಗ್ರ ಆಕೆಯತ್ತ ಗು೦ಡು ಹಾರಿಸಿದನಾದರೂ ಅದು ಆಕೆಗೆ ತಪ್ಪಿ ಕುಟು೦ಬದ ಇನ್ನೊಬ್ಬರಿಗೆ ಬಿತ್ತು. ಇನ್ನೊಬ್ಬನ ಮೇಲೂ ರುಕ್ಸನಾ ಕೊಡಲಿ ಬೀಸಿದಳು. ಅವನು ಬದುಕಿದರೆ ಸಾಕೆ೦ದು ಪರಾರಿಯಾದ. ಭದ್ರತಾ ಪಡೆಗಳು ಈಗ ಪರಾರಿಯಾದವನಿಗೆ ಶೋಧ ಆರ೦ಭಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>(ಏಜನ್ಸೀಸ್)












Click it and Unblock the Notifications