ಚಾಂಪಿಯನ್ಸ್ ಟ್ರೋಫಿ : ಭಾರತಕ್ಕೆ ಒಂದಂಕ

ಸೂಪರ್ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಂಟರ್ ಪಡೆ 42.3 ಓವರ್ ಗಳಲ್ಲಿ ನಾಲ್ಕು ವಿಕೆಟ್ ಗೆ 234 ರನ್ ಪೇರಿಸಿದ್ದಾಗ ಮಳೆ ಸುರಿದು ಪಂದ್ಯಕ್ಕೆ ಅಡ್ಡಿಯಾಯಿತು. ಕೆಮಾರುನ್ ವೈಟ್ 35 ಮತ್ತು ಫ್ಯರ್ಗ್ಯುಸನ್ 2 ರನ್ ಗಳಲ್ಲಿ ಬ್ಯಾಟ್ ಮಾಡುತ್ತಿದ್ದರು. ಆರಂಭಿಕ ಆಟಗಾರ ಟಿಂ ಪೇನ್ 56, ರಿಕಿ ಪಾಂಟಿಂಗ್ 65 ಮತ್ತು ಮೈಕ್ ಹಸ್ಸಿ 67 ರನ್ ಗಳಿಸಿ ಔಟಾಗಿದ್ದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ಪಂದ್ಯವನ್ನು ರದ್ದುಗೊಳಿಸಬೇಕಾಯಿತು.
ಭಾರತದ ಸೆಮಿಫೈನಲ್ ಲೆಕ್ಕಾಚಾರ : ವೆಸ್ಟ್ ಇಂಡೀಸ್ ವಿರುದ್ದ ಭಾರತ ಗೆದ್ದು, ಆಸ್ಟ್ರೇಲಿಯಾ ವಿರುದ್ದ ಪಾಕಿಸ್ತಾನ ಜಯ ಗಳಿಸಿದರೆ, ಆಸ್ಟ್ರೇಲಿಯಾ ತಂಡಕ್ಕಿಂತ ಭಾರತದ ರನ್ ರೇಟ್ ಉತ್ತಮವಾಗಿದ್ದರೆ ಮಾತ್ರ ಭಾರತದ ಸೆಮಿಫೈನಲ್ ಕನಸು ಜೀವಂತವಾಗಿರಲು ಸಾಧ್ಯ.
(ಏಜನ್ಸೀಸ್)












Click it and Unblock the Notifications