ವರ್ಲ್ಡ್ ನಂ1 ಬಾಕ್ಸರ್ ಆದ ವಿಜೇಂದರ್ ಸಿಂಗ್
ನವದೆಹಲಿ,
ಸೆ. 29 : ಒಲಿಂಪಿಕ್ಸ್ ಕ್ರಿಡಾಕೂಟದ ಬಾಕ್ಸಿಂಗ್ ವಿಭಾಗದಲ್ಲಿ ಕಂಚಿನ ಪದಕ ತಂದು ಮೊಟ್ಟ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದ ವಿಜೇಂದರ್ ಸಿಂಗ್ ಇದೀಗ ಮತ್ತೊಂದು ಸಾಧನೆ ಮಾಡಿದ್ದು. 75 ಕೆಜಿ ಬಾಕ್ಸಿಂಗ್ ವಿಭಾಗದಲ್ಲಿ ಉಜ್ಬೇಕಿಸ್ತಾನ್ ದ ಅಬ್ಬೊಸ್ ಅಟೋವ್ ಅವರನ್ನು ಸೋಲಿಸುವ ಮೂಲಕ ವಿಶ್ವದ ನಂಬರ್ ಒನ್ ಬಾಕ್ಸರ್ ಎಂಬ ಕಿರೀಟ ಧರಿಸಿದ್ದಾರೆ. id="toptextpromo">ಭಾರತದ
ಮೊಟ್ಟ ಮೊದಲ ವಿಶ್ವದ ನಂಬರ್ ಒನ್ ಬಾಕ್ಸಿಂಗ್ ಪಟುವಾಗಿ ಹೊರಹೊಮ್ಮಿದ್ದಾರೆ.ಇತ್ತೀಚೆಗೆ ಮಿಲಾನ್ ನಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಷ್ ನಲ್ಲಿ ಪದಕ ಗೆದ್ದಿದ್ದ 23 ರ ಹರೆಯದ ವಿಜೇಂದರ್ ಸಿಂಗ್ 200 ಅಂಕ ಪಡೆಯುವ ಮೂಲಕ ಉಜ್ಬೇಕಿಸ್ತಾನ್ ದ ಅಟೋವ್ ಅವರ ಹಿಂದಿಕ್ಕಿ ವಿಶ್ವದ ನಂಬರ್ ಒನ್ ಬಾಕ್ಸರ್ ಆಗಿ ಹೊರಹೊಮ್ಮಿದ್ದಾರೆ. ವಿಶ್ವದ ನಂಬರ್ ಒನ್ ಬಾಕ್ಸರ್ ಆಗಿ ಹೊರಹೊಮ್ಮಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ವಿಜೇಂದರ್ ಸಿಂಗ್, ಭಾರತೀಯನಾಗಿ ನಾನು ವಿಶ್ವ ನಂಬರ್ ಒನ್ ಬಾಕ್ಸರ್ ಆಗಿರುವುದು ಸಂತೋಷದ ಸಂಗತಿ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>
(ಏಜನ್ಸೀಸ್)












Click it and Unblock the Notifications