ಸಾಧಕರ ನೆರಳು ವಿದ್ಯಾರ್ಥಿಗಳ ಮೇಲೆ

Shadow a CEO a nurse shadow a teacher
ಬೆಂಗಳೂರು, ಸೆ. 9 : ವಾಣಿಜ್ಯ ವಿದ್ಯೆ ಕಲಿಕೆಯಲ್ಲಿ ತೊಡಗಿರುವ ವಿದ್ಯಾರ್ಥಿವೃಂದವನ್ನು ಪುಳಕಗೊಳಿಸುವ ಸುದ್ದಿಯಿದು. ಉದ್ಯಮ ಕ್ಷೇತ್ರದಲ್ಲಿ ಪಳಗಿರುವ, ಹಿರಿಯ ಆಡಳಿತಗಾರರೊಂದಿಗೆ ( CEOs) ಒಂದು ದಿನ ಕಳೆಯುವ ಅಪೂರ್ವ ಅವಕಾಶ ಈ ವಿದ್ಯಾರ್ಥಿಗಳನ್ನು ಅರಸಿಕೊಂಡು ಬಂದಿದೆ. ಕಾರ್ಪೋರೇಟ್ ಪ್ರಪಂಚದಲ್ಲಿನ ವಿದ್ಯಮಾನಗಳನ್ನು ಅರಿಯಲು, ಆಡಳಿತದಲ್ಲಿ ನುರಿತ ಸಾಧಕರೊಂದಿಗೆ ಒಂದು ದಿನದ ಒಡನಾಟವನ್ನು ಅನುಭವಿಸಲು ಬಾಗಿಲು ತೆರೆದಿವೆ.

ವಿವರಗಳು ಹೀಗಿವೆ : ಹೈದರಾಬಾದಿನಲ್ಲಿರುವ ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್ನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮಗೆ ಇಷ್ಟವಾಗುವ ಯಾವುದಾದರೂ ಒಬ್ಬ ಸಿಇಒ ಜತೆ ಒಂದು ದಿನ ಕಳೆಯಬಹುದು. ಅದಕ್ಕಾಗಿ ವಿದ್ಯಾರ್ಥಿಗಳು ಆನ್ ಲೈನ್ ನಲ್ಲಿ ಬಿಡ್ ಮಾಡಬೇಕು. ಅತಿಹೆಚ್ಚು ಹಣ ತೆರುವ ವಿದ್ಯಾರ್ಥಿಗಳಿಗೆ ಸಿಇಒ ಜತೆ ಒಂದು ದಿನ ಕಳೆಯುವ ಅವಕಾಶ ಲಭ್ಯವಾಗುತ್ತದೆ. ಸಿಇಒ ನಂದನ್ ನಿಲೇಕಣಿ ಇರಬಹುದು, ನಾರಾಯಣಮೂರ್ತಿ ಇರಬಹುದು, ಅಥವಾ ಬೈಯೋಕಾನ್ ಸಿಇಒ ಕಿರಣ್ ಮುಜಮ್ದಾರ್ ಆಗಿರಬಹುದು. ಹೈದರಾಬಾದ್ ನ Indian School of Business ( ISB) ಈ ಸಂವಹನ ಕಾರ್ಯಕ್ರಮವನ್ನು ರೂಪಿಸಿದ್ದು, ಅದಕ್ಕೆ Shadow A CEO ಎಂದು ನಾಮಕರಣ ಮಾಡಲಾಗಿದೆ.

ಸಿಇಒಗಳನ್ನು ಮತ್ತು ವಿದ್ಯಾರ್ಜನೆ ಮಾಡುತ್ತಿರುವ ನಾಳಿನ ಸಿಇಒಗಳನ್ನು ಮುಖಾಮುಖಿ ಮಾಡಿಸುವುದು ಈ ಪ್ರಯತ್ನದ ಉದ್ದೇಶ. ಸಿಇಒ ಭೇಟಿಗೆ ಬಿಡ್ ಮಾಡುವ ಮೂಲಕ ಬರುವ ಹಣವನ್ನು ಸಂಬಂಧಿಸಿದ ಸಿಇಒ ತಮಗೆ ಇಷ್ಟವಾದ ಸರಕಾರೇತರ ಸಂಸ್ಥೆಗೆ ದೇಣಿಗೆಯಾಗಿ ಕೊಡುತ್ತಾರೆ. ಶಾಡೊ ಎ ಸಿಇಒ ಹೆಸರಿನ ಈ ಕಾರ್ಯಕ್ರಮದ ಉದ್ದೇಶಗಳಿಗೆ ಎರಡು ಮಜಲು. ಕಾರ್ಪೋರೇಟ್ ಸಂಸ್ಥೆಗಳನ್ನು ಸಾಮಾಜಿಕ ಸೇವೆಗಳಲ್ಲಿ ತೊಡಗಿಸುವುದು ಹಾಗೂ ನಾಳೆ ಎದುರಾಗುವ ಆಡಳಿತದ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಖುದ್ದು ಸಜ್ಜಗೊಳಿಸುವುದು. ತಮ್ಮ ನೆಟ್ ವರ್ಕ್ ಅನ್ನು ವಿಸ್ತಾರಗೊಳಿಸಿಕೊಳ್ಳುವುದು.

ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್ ವಿದ್ಯಾರ್ಥಿಗಳೇ ರೂಪಿಸಿರುವ ಯೋಜನೆ ಇದಾಗಿದೆ. ಸಾಮಾಜಿಕ ಮುಖ ಮತ್ತು ವ್ಯಾಪಾರಿ ಉದ್ದೇಶಗಳನ್ನು ಹದವಾಗಿ ಬೆರೆಸುವ ಹಂಬಲ ವಿದ್ಯಾರ್ಥಿ ಸಮೂಹದ್ದು. ಸೆಪ್ಟೆಂಬರ್ 21 ರಿಂದ 23 ರವರೆಗೆ ಜರಗುವ ಈ ಸಂವಹನ ಕಾರ್ಯಕ್ರಮವು ಜಾಯ್ ಆಫ್ ಗಿವಿಂಗ್ ವೀಕ್ ನ ಒಂದಂಗವಾಗಿರುತ್ತದೆ. ಇಂಡಿಯನ್ ಸ್ಕೂಲ್ ಆಫ್ ಬಿಜಿನೆಸ್ ಸಂಸ್ಥೆಯಲ್ಲಿ 575 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

Shadow A CEO ಕಾರ್ಯಕ್ರಮವನ್ನು ಮಾದರಿಯಾಗಿ ಇಟ್ಟುಕೊಂಡು ನಮ್ಮ ಇತರ ಅನೇಕ ಕಾಲೇಜು ವಿದ್ಯಾರ್ಥಿಗಳು ತಮ್ಮ ವ್ಯಾಸಂಗಕ್ಕೆ ಒಪ್ಪುವ ಇಂಥವೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಉದಾಹರಣೆಗೆ : Shadow A Physician, Shadow A Nurse, Shadow A award winning teacher, Shadow A BTS Conductor, Shadow A Gardener

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+