ಎಚ್1ಎನ್1ಗೆ ಮತ್ತೆ ನಾಲ್ಕು ಬಲಿ

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 27 ವರ್ಷದ ಯುವಕ. ಆಗಸ್ಟ್ 22 ರಂದು ಸೇರಿ ಸೆಪ್ಟೆಂಬರ್ 2 ರಂದು ಸಾವನ್ನಪ್ಪಿದ್ದಾರೆ. ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ 41 ವರ್ಷ ವ್ಯಕ್ತಿಯೊಬ್ಬರು ಆಗಸ್ಟ್ 24 ರಂದು ಸೇರಿ, ಆಗಸ್ಟ್ 29 ರಂದು ಮೃತಪಟ್ಟಿದ್ದಾರೆ. ಮತ್ತೊಬ್ಬ 31 ರ ಹರೆಯದ ಯುವಕ ಆಗಸ್ಟ್ 14 ರಂದು ಆಸ್ಪತ್ರೆ ಸೇರಿ ಸೆ. 1ರಂದು ನಿಧನರಾಗಿದ್ದಾರೆ. ಹಾಗೂ 29 ವರ್ಷದ ಮಹಿಳೆ ಆಗಸ್ಟ್ 31 ರಂದು ಆಸ್ಪತ್ರೆಗೆ ಸೇರಿ ಸೆ. 1 ರಂದು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮತ್ತೆ 19 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಇದುವರೆಗೂ 536 ಮಂದಿಯಲ್ಲಿ ಸೋಂಕು ಕಂಡು ಬಂದಿದೆ. ಬೆಂಗಳೂರು ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ 3.46 ಲಕ್ಷ ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ 43 ಸಾವಿರ ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications