ಸ್ಟೇಫಾನಿಯಾ ಮುಡಿಗೇರಿದ ಭುವನ ಸುಂದರಿ 2009 ಪಟ್ಟ

ಬೆಡಗಿಯರ ಸೌಂದರ್ಯ ಸ್ಪರ್ಧೆಯಲ್ಲಿ ವೆನಿಜುವೆಲಾ ಮುಂಚೂಣಿಯಲ್ಲಿರುವಂಥ ರಾಷ್ಟ್ರ. 2009ನೇ ಸಾಲಿನ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಇಲ್ಲಿಯವರೆಗೆ 5 ಭುವನಸುಂದರಿ, 5 ವಿಶ್ವ ಸುಂದರಿ ಮತ್ತು ನಾಲ್ಕು ಮಿಸ್ ಅಂತಾರಾಷ್ಟ್ರೀಯ ಸುಂದರಿ ಪ್ರಶಸ್ತಿಗಳನ್ನು ಬಾಚಿಕೊಂಡ ದೇಶವಾಗಿದೆ. ಭಾರತದ ಸುಂದರಿ ನವದೆಹಲಿಯ ಏಕ್ತಾ ಚೌಧರಿ 15 ಸುಂದರಿಯರ ಪಟ್ಟಿಗೆ ಆಯ್ಕೆಯಾಗಲೂ ವಿಫಲವಾಗಿ ನಿರಾಶೆಗೊಳಿಸಿದರು.
ಆಸ್ಟ್ರೇಲಿಯಾದ ರಾಚೆಲ್ ಪಿಂಚ್ ಹಾಗೂ ಪೂರ್ಟ್ ರಿಕೋದ ಮಯಾರ್ ಮಾಟೋಸ್ ಪೆರೆಜ್ ಇಬ್ಬರೂ ಮೊದಲ ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡರೆ, ಎರಡನೇ ರನ್ನರ್ ಅಪ್ ಪ್ರಶಸ್ತಿಯನ್ನು ಕೋಸವೋದ ಗೋನಾ ಡ್ರಾಗುಶಾ ಅವರ ಪಾಲಾಗಿದೆ.
15 ಸುಂದರಿಯರ ಪಟ್ಟಿಯಲ್ಲಿ ಕ್ರೊವೇಶಿಯಾ, ಆಸ್ಟ್ರೇಲಿಯಾ, ಅಲ್ಬೇನಿಯಾ, ಬೆಲ್ಜಿಯಂ, ಚೆಕ್ ಗಣರಾಜ್ಯ, ಡೋಮಿನಿಕನ್ ರಿಪಬ್ಲಿಕ್, ಫ್ರಾನ್ಸ್, ಐಲ್ಯಾಂಡ್, ಕೋಸಾವೋ, ಪೂರ್ಟ್ ರಿಕೋ, ಸ್ವೀಡನ್, ಸ್ವಿಜರ್ ಲ್ಯಾಂಡ್, ದಕ್ಷಿಣ ಆಫ್ರಿಕಾ, ಅಮೇರಿಕ ಮತ್ತು ವೆನೆಜುವೆಲಾದ ಸುಂದರಿಯರು ಇದ್ದರು. ಭುವನ ಸುಂದರಿ ಸ್ಪರ್ಧೆಯಲ್ಲಿ ಒಟ್ಟು 80 ದೇಶದ ಸುಂದರಿಯರು ಭಾಗವಹಿಸಿದ್ದರು.
(ಏಜನ್ಸೀಸ್)
ವಿಡಿಯೋ : ಭುವನ ಸುಂದರಿ 2009 ಮಿಸಿ ವೆನಿಜುವೆಲಾ












Click it and Unblock the Notifications