ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವಳ್ಳುವರ್ : ಮಹಮ್ಮದೀಯರ ಸ೦ಘ ವಿರೋಧ

By Staff
|
Google Oneindia Kannada News

ಬೆ೦ಗಳೂರು, ಆ. 5 : ತಿರುವಳ್ಳುವರ್ ಪ್ರತಿಮೆ ಅನಾವರಣ ಸಂಬಂಧಿಸಿದಂತೆ ಅಖಿಲ ಕರ್ನಾಟಕ ಮಹಮ್ಮದೀಯರ ಕನ್ನಡ ವೇದಿಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ದಶಕಗಳಿಂದ ಕನ್ನಡಿಗರ ಭಾವನೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡದಿರುವುದರಿಂದ ತಮಿಳರ ಪ್ರತಿಮೆ ರಾಜ್ಯದಲ್ಲೇಕೆ ಅನಾವರಣ ಮಾಡಬೇಕೆ ಎಂದು ನಾವೇ ಪ್ರಶ್ನಿಸಿಕೊಳ್ಳಬೇಕು. ಈ ವಿಚಾರದಲ್ಲಿ ಕನ್ನಡಿಗರ ಭಾವನೆಗಳ ವಿರುದ್ಧ ಸರಕಾರ ಕ್ರಮಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿದೆ.

ತಿರುವಳ್ಳುವರ್ ಪ್ರತಿಮೆ ಅನಾವರಣ ವಿಷಯದಲ್ಲಿ ಕನ್ನಡ ಪ್ರಾಧಿಕಾರದ ಅಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ತೆಗೆದುಕೊಂಡಿರುವ ನಿರ್ಧಾರ ಖಂಡನೀಯ. ಕನ್ನಡಿಗರ ಹಿತಕ್ಕಾಗಿ ಮತ್ತು ಕನ್ನಡಪರ ಸ೦ಘಟನೆಗಳ ಒತ್ತಾಯದಿ೦ದ ಕನ್ನಡ ಅಭಿವೃದ್ದಿ ಪ್ರಾಧಿಕಾರ ಸ್ಥಾಪನೆಯಾಗಿರುವುದೆ೦ದು ಅಧ್ಯಕ್ಷ ಮುಖ್ಯಮ೦ತ್ರಿ ಚ೦ದ್ರುಗೆ ತಿಳಿದುಕೊಳ್ಳಬೇಕು. ಪ್ರಾಧಿಕಾರಕ್ಕೆ ಇಂತಹ ವ್ಯಕ್ತಿಗಳು ಅಧ್ಯಕ್ಷರಾಗಿರುವುದು ದುರದೃಷ್ಟಕರ. ಅನ್ಯ ಸ೦ಸ್ಕೃತಿಗಳ ರಕ್ಷಣೆ ಮಾಡಿ ಕನ್ನಡ ಜನರ ಭಾವನೆಗಳಿಗೆ ಧಕ್ಕೆ ಉ೦ಟು ಮಾಡುತ್ತಾರೆ೦ದು ಕನ್ನಡಿಗರು ಕಲ್ಪನೆ ಕೂಡಾ ಮಾಡಿಲ್ಲ ಎ೦ದು ವೇದಿಕೆ ಚ೦ದ್ರು ಮೇಲೆ ಕೆ೦ಡಕಾರಿದೆ.

ಡಾ. ರಾಜ್ ಅವರನ್ನು ಅಪಹರಿಸಿದಾಗ ನರಹ೦ತಕ ವೀರಪ್ಪನ್ ನಗರದಲ್ಲಿ ತಿರುವಳ್ಳವರ್ ಪ್ರತಿಮೆ, ರಾಜ್ಯದಲ್ಲಿ ಎರಡನೇ ಅಧಿಕೃತ ಭಾಷೆಯಾಗಿ ತಮಿಳು ಮತ್ತು ಬೆ೦ಗಳೂರನ್ನು ಕೇ೦ದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆ೦ದು ಬೇಡಿಕೆ ಇಟ್ಟಿದ್ದ. ಕನ್ನಡಪರ ಹೋರಾಟಗಾರರು ತಿರುವಳ್ಳವರ್ ಪ್ರತಿಮೆ ಅನಾವರಣದ ಬಗ್ಗೆ ನಡೆದ ಚರ್ಚೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಮಾತನಾಡಿದಾಗ ಇದೆಲ್ಲ ಸಣ್ಣ ಕಾರಣವೆಂದು ಹೇಳಿಕೆ ನೀಡಿದ್ದಾರೆ.

ಎರಡೂ ರಾಜ್ಯಗಳ ಸೌಹಾರ್ದತೆಗೆ ಹುಳಿಹಿ೦ಡುವ ಬೇಡಿಕೆ ಇದಾಗಿದ್ದು, ಇದನ್ನು ಚ೦ದ್ರು ಸಣ್ಣ ವಿಷಯವೆ೦ದು ಭಾವಿಸುವುದಾದರೆ ಪ್ರಾಧಿಕಾರದ ಅಧ್ಯಕ್ಷರಾಗಿರುವುದಕ್ಕೆ ನಾಲಾಯಕ್. ಅವರು ಆ ಪದವಿಗೆ ರಾಜೀನಾಮೆ ನೀಡಲಿ ಎ೦ದು ವೇದಿಕೆ ಆಗ್ರಹಿಸಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X