ಪುಣೆ : ಹಂದಿಜ್ವರಕ್ಕೆ ಬಾಲಕಿ ಬಲಿ

ಪುಣೆ, ಆ. 4 : ಜಗತ್ತಿಗೆ ಮಾರಿಯಾಗಿರುವ ಹಂದಿಜ್ವರಕ್ಕೆ ಸಿಂಗಾಪುರ್ ದಲ್ಲಿ ಭಾರತೀಯ ವ್ಯಕ್ತಿಯೊಬ್ಬ ಮೃತಪಟ್ಟ ಬೆನ್ನಲ್ಲೇ ಪುಣೆಯಲ್ಲಿ 14 ವರ್ಷದ ಬಾಲಕಿಯೊಬ್ಬಳು ಎಚ್ 1ಎನ್1 ವೈರಸ್ ಗೆ ತುತ್ತಾಗಿ ಸಾವಿಗೀಡಾಗಿರುವ ಘಟನೆ ಪುಣೆಯಿಂದ ವರದಿಯಾಗಿದೆ.

ರಿಯಾ ಶೇಖ್ (14) ಮೃತಪಟ್ಟ ನತದೃಷ್ಟೆ. 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ರಿಯಾಗೆ ಕಳೆದ ತಿಂಗಳು 27 ರಂದು ಹಂದಿಜ್ವರದ ಲಕ್ಷಣಗಳು ಕಂಡುಬಂದಿತ್ತು. ತಕ್ಷಣ ನಗರದ ಜಹಾಂಗೀರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ರಿಯಾಳ ರಕ್ತ ತಪಾಸಣೆ ಮಾಡಿದ್ದರಿಂದ ಹಂದಿಜ್ವರ ಇರುವುದು ಪತ್ತೆಯಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ರಿಯಾ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ರಿಯಾ ಪ್ರಕರಣ ರಾಜಕೀರಣಗೊಂಡಿದ್ದು, ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಹಂದಿಜ್ವರಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳುತ್ತಲೇ ಬಂದಿದ್ದರು. ಬಾಲಕಿ ಸಾವಿಗೆ ಖಾಸಗಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಬಾಲಕಿಯ ಪೋಷಕರು ಆರೋಪಿಸಿದ್ದಾರೆ.

(ಏಜನ್ಸೀಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+