ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರಕ್ಕೂ ಕೆಎಂಎಫ್ ಹಾಲು : ರೆಡ್ಡಿ

By Staff
|
Google Oneindia Kannada News

Somashekar Reddy meets Yeddyurappa
ಬೆಂಗಳೂರು, ಆ. 3 : ಆಂಧ್ರಪ್ರದೇಶದಲ್ಲಿ ಒಂದು ಲೀಟರ್ ಹಾಲಿನ ಬೆಲೆ 24 ರೂಪಾಯಿ, ರಾಜ್ಯದಲ್ಲಿ 16 ರೂಪಾಯಿ. ಆದ ಕಾರಣ ನಮ್ಮ ಒಕ್ಕೂಟದ ಮಾರುಕಟ್ಟೆಯನ್ನು ಆಂಧ್ರಪ್ರದೇಶಕ್ಕೂ ವಿಸ್ತರಿಸಲು ಕ್ರಮಕೈಗೊಳ್ಳಲಿದ್ದೇವೆ. ಇದು ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಮಾಜಿ ಅಧ್ಯಕ್ಷ ರೇವಣ್ಣ ಕಳೆದ 15 ವರ್ಷಗಳಲ್ಲಿ ಮಾಡಲಾಗದ ಸಾಧನೆಯನ್ನು ಐದು ವರ್ಷದಲ್ಲಿ ಮಾಡಿ ತೋರಿಸುತ್ತೇನೆಂದು ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ ಹೇಳಿದ್ದಾರೆ.

ಕೆಎಂಎಫ್ ಈಗ ವಾರ್ಷಿಕ 3315 ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ. ಇದನ್ನು ಮೂವತ್ತು ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ರಾಜ್ಯದಲ್ಲಿ ಸುಮಾರು 45 ಲಕ್ಷ ಮಂದಿ ಹೈನೋದ್ಯಮದಲ್ಲಿ ತೊಡಗಿದ್ದಾರೆ. ಇನ್ನೂ ಹೆಚ್ಚಿನ ಮಂದಿಯನ್ನು ಈ ಉದ್ಯಮದಲ್ಲಿ ತೊಡಗಿಸುವಂತೆ ಪ್ರೋತ್ಸಾಹಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ರೆಡ್ಡಿ ಹೇಳಿಕೆ ನೀಡಿದ್ದಾರೆ.

ಕೆಎಂಎಫ್ ತುಪ್ಪ ಅತ್ಯುತ್ತಮವಾಗಿದೆ. ತಿರುಪತಿ ದೇವಾಲಯಕ್ಕೆ ಲಡ್ಡು ತಯಾರಿಸಲು ಈ ತುಪ್ಪವನ್ನೇ ಬಳಸಲಾಗುತ್ತಿದೆ. ಇದರಿಂದ ತಯಾರಿಸಿದ ಲಾಡು ರುಚಿಕರವಾಗಿರುತ್ತದೆ. ಟಿಟಿಡಿ ಆಡಳಿತ ಮಂಡಳಿ ಕೂಡ ಇದೇ ಅಭಿಪ್ರಾಯ ಹೊಂದಿದೆ ಮತ್ತು ಹೆಚ್ಚಿಗೆ ತರಿಸುಕೊಳ್ಳುವಂತೆ ಆಡಳಿತ ಮಂಡಳಿಯ ಅಧ್ಯಕ್ಷರ ಜೊತೆ ಮಾತುಕತೆ ನಡೆಸಲಾಗಿದೆ ಎಂದು ರೆಡ್ಡಿ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X